ಮಾಜಿ ಅಧಿಕಾರಿ ಮನೆಯಲ್ಲಿ 38 ಕೋಟಿ ಪತ್ತೆ

224

ಪ್ರಜಾಸ್ತ್ರ ಸುದ್ದಿ

ಅಕ್ರಮ ಆಸ್ತಿ ಗಳಿಕೆ ಸಂಬಂಧ ವಾಪ್ಕಸ್ ಮಾಜಿ ಅಧ್ಯಕ್ಷ ರಾಜಿಂದರ್ ಕುಮಾರ್ ಗುಪ್ತಾ ಹಾಗೂ ಅವರ ಮಗ ಗೌರವ್ ನನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಮಂಗಳವಾರ ವಿವಿಧ ಕಡೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 38 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

ಮಂಗಳವಾರ 20 ಕೋಟಿ ರೂಪಾಯಿ ಪತ್ತೆಯಾಗಿತ್ತು. ಇಂದು 18 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಇದರ ಜೊತೆಗೆ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿಯ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ. ದೆಹಲಿ, ಗುರ್ ಗ್ರಾಮ್, ಚಂಡೀಗಢ, ಗಾಜಯಾಬಾದ್, ಸೋನಿಪತ್ ಸೇರಿ 19 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ರಾಜಿಂದರ್ ಕುಮಾರ್ ಗುಪ್ತಾ ನಿವೃತ್ತಿ ಬಳಿಕ ದೆಹಲಿಯಲ್ಲಿ ಖಾಸಗಿಯಾಗಿ ಕನ್ಸ್ ಲ್ಟೆನ್ಸಿ ಕಂಪನಿ ಸ್ಥಾಪನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ವಾಣಿಜ್ಯ ಆಸ್ತಿ, ಫ್ಲಾಟ್, ಫಾರ್ಮ್ ಹೌಸ್ ಗಳಿವೆ ಎಂದು ತಿಳಿದು ಬಂದಿದೆ.

ವಾಪ್ಕಾಸ್ ಅಂದರೆ ವಾಟರ್ ಅಂಡ್ ಪವರ್ ಕನ್ಸ್ ಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್. ಇದು ಪೂರ್ತಿಯಾಗಿ ಸರ್ಕಾರದ ಒಡೆತನದಲ್ಲಿದೆ. ಜಲಶಕ್ತಿ ಸಚಿವಾಲಯದ ಆಡಳಿತಕ್ಕೆ ಒಳಪಡುತ್ತದೆ. ಏಪ್ರಿಲ್ 1, 2011ರಿಂದ ಮಾರ್ಚ್ 31, 2019ರ ತನಕ ಅಧಿಕಾರದಲ್ಲಿದ್ದ ರಾಜಿಂದರ್ ಕುಮಾರ್ ಗುಪ್ತಾ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪವಿತ್ತು. ಈ ಸಂಬಂಧ ರಾಜಿಂದರ್, ಪತ್ನಿ ರೀಮಾ, ಮಗ ಗೌರವ್, ಸೊಸೆ ಕೋಮಲ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.


TAG


Leave a Reply

Your email address will not be published. Required fields are marked *

error: Content is protected !!