ಬಂಡಾಯವೆದ್ದ ಮಾಜಿ ಸಚಿವರು ಸೇರಿ 24 ಕೈ ಮುಖಂಡರ ಉಚ್ಛಾಟನೆ

118

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭಾ ಚುನಾವಣೆಲ್ಲಿ ಟಿಕೆಟ್ ಸಿಗದೆ ಇರುವ ಕಾರಣಕ್ಕೆ ಅಧಿಕೃತ ಅಭ್ಯರ್ಥಿಗಳ ಪರ ಕೆಲಸ ಮಾಡದೆ, ಪಕ್ಷ ವಿರೋಧಿ ಚಟುವಟಕೆಗಳನ್ನು ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡರನ್ನು ಉಚ್ಛಾಟಿಸಲಾಗಿದೆ. ಮಾಜಿ ಸಚಿವರು, ಮಾಜಿ ಶಾಸಕರು ಸೇರಿ 24 ಮುಖಂಡರನ್ನು ಉಚ್ಛಾಟಿಸಲಾಗಿದೆ.

ಪ್ರಾಥಮಿಕ ಸದಸ್ಯತ್ವದಿಂದಲೇ ಅವರನ್ನು ಉಚ್ಛಾಟಿಸಲಾಗಿದೆ. ಹೀಗಾಗಿ 6 ವರ್ಷಗಳ ಕಾಲ ಪಕ್ಷ ಸೇರುವಂತಿಲ್ಲ ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಈ ಕ್ರಮ ತೆಗೆದುಕೊಂಡಿದ್ದಾರೆ.

ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕುಣಿಗಲ್ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಹರಪನಹಳ್ಳಿಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಅರಕಲಗೂಡು ಕಾಂಗ್ರೆಸ್ ನಾಯಕ ಕೃಷ್ಣೇಗೌಡ, ಬೀದರ್ ದಕ್ಷಿಣ ಕೆಪಿಸಿಸಿ ಸಂಯೋಜಕ ಚಂದ್ರಾ ಸಿಂಗ್, ತರಿಕೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋಪಿಕೃಷ್ಣ, ಖಾನಾಪುರದಲ್ಲಿ ಸ್ಪರ್ಧಿಸಿರುವ ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟೆ, ತೇರದಾಳದ ಕಾಂಗ್ರೆಸ್ ಕಿಸಾನ್ ಸೆಲ್ ಉಪಾಧ್ಯಕ್ಷ ಡಾ.ಪದ್ಮಜೀತ್ ನಾಡಗೌಡ, ಹು-ಧಾರವಾಡ ಪಶ್ಚಿಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ್ ಮಲ್ಕಾರಿ, ನೆಲಮಂಗಲದ ಲೇಬರ್ ಸೆಲ್ ಉಪಾಧ್ಯಕ್ಷೆ ಉಮಾದೇವಿ, ಬೀದರ್ ದಕ್ಷಿಣದಿಂದ ಸ್ಪರ್ಧಿಸಿರುವ ಬೀದರ್ ಡಿಸಿಸಿ ಉಪಾಧ್ಯಕ್ಷ ಯೂಸುಫ್ ಅಲೀ ಜಮ್ದಾರ್.

ಬೀದರ್ ಎಸ್‍ಟಿ ಸೆಲ್‍ ಅಧ್ಯಕ್ಷ ನಾರಾಯಣ್ ಬಂಗಿ, ಮಾಯಕೊಂಡದಿಂದ ಸವಿತಾ ಮಲ್ಲೇಶ್ ನಾಯಕ್, ಶ್ರೀರಂಗಪಟ್ಟಣದ ಪಿ.ಎಚ್. ಚಂದ್ರಶೇಖರ್, ಶಿಡ್ಲಘಟ್ಟದ ಪಿಟ್ಟು ಆಂಜನಪ್ಪ, ರಾಯಭಾಗದ ಶಂಭು ಕೋಲ್ಕರ್, ಶಿವಮೊಗ್ಗ ಗ್ರಾಮಾಂತರದಿಂದ ಬಿ.ಎಚ್. ಭೀಮಪ್ಪ, ಶಿಕಾರಿಪುರದ ಎಸ್ಪಿ.ನಾಗರಾಜಗೌಡ, ತರೀಕೆರೆಯ ದೋರ್ನಲ್ ಪರಮೇಶ್ವರಪ್ಪ, ಬೀದರ ಶಶಿ ಚೌದಿ, ಔರಾದ್ ಲಕ್ಷ್ಮಣ್ ಸೊರಳಿ, ರಾಯಚೂರು ನಗರದಿಂದ ಮಜೀಬುದ್ದೀನ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಇವರಿಗೆ ಟಿಕೆಟ್ ಸಿಗದೆ ಹೋಗಿದ್ದಕ್ಕೆ ಬಂಡಾಯವೆದ್ದಿದ್ದಾರೆ. ಹೀಗಾಗಿ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!