‘ಪಿಎಫ್ಐ ಜೊತೆ ಭಜರಂಗದಳ ಹೋಲಿಕೆ ಸರಿಯಲ್ಲ’

99

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಭಜರಂಗದಳ ಸಂಘಟನೆ ನಿಷೇಧ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ, ಗಲಭೆ ಮಾಡಿಸುವ ಉದ್ದೇಶದಿಂದ ಭಜರಂಗದಳ ನಿಷೇಧ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಆದರೆ, ಅದು ಹೇಗೆ ಸಾಧ್ಯ. ಭಜರಂಗದಳ ಇಡೀ ದೇಶದಲ್ಲಿರುವ ಸಂಘಟನೆ, ಕಾಂಗ್ರೆಸ್ ಅಧಿಕಾರದಲ್ಲೇ ಇಲ್ಲ ಎಂದರು.

ಪಿಎಫ್ಐ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ. ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅದಕ್ಕೆ ಸಾಕ್ಷಿಗಳಿವೆ. ಭಜರಂಗದಳ ಧಾರ್ಮಿಕ, ಸಾಮಾಜಿಕ ಕೆಲಸ ಮಾಡುತ್ತಿದೆ. ಎರಡೂ ಒಂದೇ ಎಂದು ಹೋಲಿಸುವುದು ಸರಿಯಲ್ಲ ಅಂತಾ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆ ಜನರನ್ನು ಮೋಸ ಮಾಡುವ, ಮರಳು ಮಾಡುವ ಪ್ರಣಾಳಿಕೆ. ನಾವು ಈಗಾಗ್ಲೇ ಮಾಡಿದ ಕೆಲಸಗಳನ್ನು ತಾವು ಮಾಡುವುದಾಗಿ ಹೇಳುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆ ಜಾರಿಗೆ ತರಲು 6 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ. ಮೀಸಲಾತಿ ಪ್ರಮಾಣ ಶೇಕಡ 75ಕ್ಕೆ ಹೆಚ್ಚಳ ಮಾಡುವುದಾಗಿ ಹೇಳಿದೆ. ಕೇಂದ್ರದಲ್ಲಿ ಇವರ ಸರ್ಕಾರ ಇದೇನಾ? ಹಿಂದುಳಿದ ಜನಾಂಗಗಳ ನಿಗಮ ಮಾಡುವುದಾಗಿ ಹೇಳಿದೆ. ಆದರೆ, ಈಗಾಗ್ಲೇ ನಾನು ಅದನ್ನು ಘೋಷಣೆ ಮಾಡಿದ್ದೇನೆ ಎಂದು ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!