ಹೊಸ ಚರ್ಚೆ ಹುಟ್ಟು ಹಾಕಿದ ಭಜರಂಗದಳ, ಪಿಎಫ್ಐ ನಿಷೇಧ ವಿಚಾರ

96

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ಹಾಗೂ ಪಿಎಫ್ಐ ಸಂಘಟನೆಗಳ ಕುರಿತು ಪ್ರಸ್ತಾಪಿಸಿದೆ. ಅದರಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. ಅದು ಬಹುಸಂಖ್ಯಾತರ, ಅಲ್ಪಸಂಖ್ಯಾತರ ಯಾವುದೇ ಸಂಘಟನೆ ಆಗಲಿ ಎಂದಿದೆ. ಇದು ಇದೀಗ ಹೊಸ ಚರ್ಚೆ ಹುಟ್ಟು ಹಾಕಿದೆ.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಭಜರಂಗದಳ ಸಂಘಟನೆಯವರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಮುಗಿಬೀಳುತ್ತಿದ್ದಾರೆ. ಭಜರಂಗದಳ ಸಂಘಟನೆ ನಿಷೇಧ ಮಾಡುವುದು ಅಂದರೆ ಸ್ವತಃ ಹನುಮಂತನಿಗೆ ಅವಮಾನ ಮಾಡಿದಂತೆ. ಭಜರಂಗದಳ ನಿಷೇಧ ಮಾಡುವ ತಾಕತ್ತು ಯಾರಿಗೂ ಇಲ್ಲ ಅನ್ನೋದು ಸೇರಿ ಸಾಕಷ್ಟು ಆಕ್ರೋಶ ಭರಿತ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನೊಂದು ಕಡೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಎಂದು ಕಾಂಗ್ರೆಸ್ ಹೇಳಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ವಿನಾಃಕಾರಣ ಮಾತನಾಡುವ ಬಿಜೆಪಿ ನಾಯಕರು ನೇರವಾಗಿ ಭಜರಂಗದಳ ಸಂಘಟನೆ ತಮಗೆ ಸಂಬಂಧಿಸಿದ್ದು ಅನ್ನೋದು ಒಪ್ಪಿಕೊಂಡಿದ್ದಾರೆ ಎಂದು ಮತ್ತೊಂದು ವರ್ಗದ ಜನರ ಮಾತು. ಕಾನೂನು ಅಡಿಯಲ್ಲಿ ಕೆಲಸ ಮಾಡಿದರೆ ಯಾವುದೇ ಸಂಘಟನೆಗೆ ಸಮಸ್ಯೆ ಇಲ್ಲ. ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರಿಗೂ ಬೆಂಬಲ ನೀಡಬೇಕು ಎಂದರೆ ಹೇಗೆ? ಅದು ಪಿಎಫ್ಐ ಆದರೂ ಅಷ್ಟೇ ಭಜರಂಗದಳ ಆದರೂ ಅಷ್ಟೇ ಎಂದು ವಾದಿಸುವ ಮೂಲಕ ಕಾಂಗ್ರೆಸ್ ನಡೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಈ ವಿಷಯ ಚುನಾವಣೆ ಕಣದಲ್ಲಿ ಮತ್ತಷ್ಟು ಕಾವು ಹೆಚ್ಚಿಸಿದೆ. ರಾಜಕೀಯ ಪಕ್ಷಗಳ ನಾಯಕರ ವಾಗ್ದಾಳಿ ಮುಂದುವರದಿದೆ. ಇದು ಪಕ್ಷಗಳ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತೆ ಅನ್ನೋದು ಮೇ 13ರ ಫಲಿತಾಂಶ ದಿನ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!