ಹಾಟ್ ನಟಿಗೆ ಆಗಂತುಕನಿಂದ ಬ್ಲ್ಯಾಕ್ ಮೇಲ್

735

ಬಹುಭಾಷಾ ನಟಿ ನಮಿತಾಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ತನ್ನ ಮೋಹಕ ಮೈಮಾಟದಿಂದಲೇ ಪಡ್ಡೆ ಹುಡುಗರ ನೆಚ್ಚಿನ ನಟಿಯಾಗಿರುವ ನಮಿತಾಗೆ ಪಾರ್ನ್ ವಿಡಿಯೋ ಕುರಿತು ಬೆದರಿಕೆ ಹಾಕಿದ್ದಾನಂತೆ. ಈ ಬಗ್ಗೆ ಸ್ವತಃ ನಟಿ ನಮಿತಾ ಬರೆದುಕೊಂಡಿದ್ದಾರೆ.

ನಾನು ನಿಮ್ಮ ಪಾರ್ನ್ ವಿಡಿಯೋಗಳನ್ನ ನೋಡಿದ್ದೇನೆ. ನೀವು ನನಗೆ ಹಣ ಕೊಡದೆಯಿದ್ರೆ ಇವುಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀನಿ ಎಂದು ಬೆದರಿಕೆಯೊಡಿದ್ದಾನೆಂದು ಹೇಳಿದ್ದಾರೆ. ಅಲ್ದೇ, ಇದಕ್ಕೂ ಮೊದ್ಲು ವೈಯುಕ್ತಿಕ ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತ್ನಾಡಿದ್ದಾನೆಂದು ನಟಿ ಹೇಳಿದ್ದಾಳೆ.

ಈ ರೀತಿಯಾಗಿ ಬೆದರಿಕೆ ಹಾಕಿದವನಿಗೆ ಛೀಮಾರಿ ಹಾಕಿದ ನಟಿ, ವಿಡಿಯೋ ಬಹಿರಂಗ ಪಡಿಸು ಎಂದಿದ್ದಾರೆ. ಆತನ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕ್ತಿದ್ದಂತೆ ಅವನು ತನ್ನ ಖಾತೆಯನ್ನ ಡಿಲಿಟ್ ಮಾಡಿದ್ದಾನೆ. ನಾನು ಯಾಕೆ ಅವನ ಮಾತು ಕೇಳಬೇಕು. ನಾನು ಗ್ಲ್ಯಾಮರ್ ಲೋಕದಲ್ಲಿ ಇದ್ದೀನಿ ಅನ್ನೋ ಕಾರಣಕ್ಕಾ.. ಸೆಲೆಬ್ರಿಟಿ ಆಗಿರುವುದಕ್ಕಾ.. ನಾನು ಸಿನ್ಮಾದಲ್ಲಿ ನಟಿಸುವಂತೆ ವೈಯಕ್ತಿ ಜೀವನದಲ್ಲಿದ್ದೀನಿ ಅಂದುಕೊಂಡಿದ್ದಾನಾ ಎಂದು ಪ್ರಶ್ನಿಸಿದ್ದಾರೆ.

ನನ್ನ ಮೌನ ದೌರ್ಬಲ್ಯವೆಂದುಕೊಳ್ಳಬೇಡಿ ಎಂದು ಆತನಿಗೆ ವಾರ್ನಿಂಗ್ ಮಾಡಿದ್ದಾಳೆ. ಇಂಥಾ ಕೆಟ್ಟ ಮನಸ್ಥಿತಿಯವರು ನವರಾತ್ರಿ, ದುರ್ಗಿ ಪೂಜೆ, ಮಹಿಳಾ ದಿನಾಚರಣೆ ಮಾಡಿದ್ರೆ ಏನು ಪ್ರಯೋಜನವೆಂದು ನಟಿ ನಮಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!