ನಟಿ ಪಲ್ಲವಿ ಡೇ ನಿಗೂಢ ಸಾವು

395

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋಲ್ಕತ್ತಾ: ಬೆಂಗಾಳಿ ಕಿರುತರೆಯ ಖ್ಯಾತ ನಟಿ ಪಲ್ಲವಿ ಡೇ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಗರ್ಫಾದಲ್ಲಿರುವ ಫ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ನೇಹಿತ ಶಾಗ್ನಿಕ್ ಚಕ್ರವರ್ತಿ ಜೊತೆ ವಾಸವಾಗಿದ್ದಳು.

ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳು ಅಲ್ಲ. ಇದರ ಹಿಂದೆ ಯಾರದ್ದೋ ಕೈವಾಡವಿದೆ ಎಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ವಿಷಯ ತಿಳಿಯಲಿದೆ.

ರೇಷಮ್ ಝಾನ್ಸಿ, ಅಮಿ ಸರ್ಜೇರ್ ಬೇಗಮ್ ಧಾರವಾಹಿಗಳು ಖ್ಯಾತಿ ತಂದು ಕಟ್ಟಿದ್ದವು. ಮೊನ್ ಮನೆ ನಾ ಅನ್ನೋ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಹೀಗಿರುವಾಗಿ ನಟಿ ಪಲ್ಲವಿ ಡೇ ಸಾವು ಆಕೆಯ ಸ್ನೇಹಿತರಿಗೆ ಶಾಕ್ ನೀಡಿದೆ.




Leave a Reply

Your email address will not be published. Required fields are marked *

error: Content is protected !!