ನಾನು ಅವಿವಾಹಿತೆ, ಬಟ್ ಮಗಳಿದ್ದಾಳೆ ಎಂದ ನಟಿ

374

ಮುಂಬೈ: ಬಾಲಿವುಡ್ ನಟಿಯೊಬ್ಬಳು ಇದೀಗ ನೀಡಿದ ಹೇಳಿಕೆ ಭರ್ಜರಿ ಸೌಂಡ್ ಮಾಡ್ತಿದೆ. ನಾನು ಅವಿವಾಹಿತೆ, ಆದ್ರೆ ನನ್ಗೆ ಮೂರು ವರ್ಷದ ಮಗಳಿದ್ದಾಳೆ ಅಂತಾ ಬಾಲಿವುಡ್ ನಟಿ ಮಹಿ ಗಿಲ್ ಹೇಳಿದ್ದಾಳೆ.

ಸಬಿ ಬೀಬಿ ಔರ್ ಗ್ಯಾಂಗ್ ಸ್ಟರ್, ದೇವ್-ಡಿ ಹಾಗೂ ಸಾಹೇಬ್ ಸಿನಿಮಾ ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿರುವ ಮಹಿ ಗಿಲ್ ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾಳೆ. ನಾನು ಹಲವು ತಿಂಗಳುಗಳಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದೇನೆ. ಅಲ್ದೇ ನನ್ಗೆ ಈಗಾಗ್ಲೇ ಮಗಳಿದ್ದು, ಆಗಸ್ಟ್ ತಿಂಗಳಲ್ಲಿ ಮೂರು ವರ್ಷವಾಗಲಿದೆ ಅಂತಾ ಹೇಳಿದ್ದಾಳೆ.

ಸಿಂಗಲ್ ಪೇರೆಂಟ್ ಬಗ್ಗೆ ನನ್ಗೆ ಹೆಮ್ಮೆ ಇದೆ. ಮದುವೆಯಾಗದೇ ಸಂತೋಷದಿಂದ ಇರಬಹುದು ಅಂದುಕೊಂಡಿದ್ದೇನೆ. ವಿವಾಹ ಅನ್ನೋದು ಅವರ ವೈಯಕ್ತಿಕ ಆಯ್ಕೆ ಎಂದಿರುವ ಮಹಿ ಗಿಲ್, ನಾನು ಇದೀಗ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದು ಅವರು ಗೋವಾದಲ್ಲಿದ್ದಾರೆ ಅಂತಾ ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!