ಸೇಡಿಗಾಗಿ 250 ನಾಯಿಮರಿಗಳನ್ನು ಕೊಂದ ಕೋತಿಗಳು!

487

ಪ್ರಜಾಸ್ತ್ರ ಸುದ್ದಿ

ಮಜಲ್ಗಾಂವ್: ನಾವು ಹಾವಿನ ಸೇಡಿನ ಬಗ್ಗೆ ಮಾತನಾಡುತ್ತೇವೆ. ಹಸುವಿನ ಸೇಡಿನ ಬಗ್ಗೆ ಕೇಳಿದ್ದೇವೆ. ಇದೀಗ ಕೋತಿಗಳ ಪಡೆಯೊಂದರ ಸೇಡಿಗೆ ಬರೋಬ್ಬರಿ 250 ನಾಯಿಮರಿಗಳ ಮಾರಣಹೋಮ ನಡೆದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಘಟನೆ ನಡೆದಿರುವುದು ಮಹಾರಾಷ್ಟ್ರದ ಮಜಲ್ಗಾಂವ್ ಜಿಲ್ಲೆಯ ಲಾವೂಲ್ ಅನ್ನೋ ಗ್ರಾಮದಲ್ಲಿ ನಡೆದಿದೆಯಂತೆ.

ನಾಯಿಗಳ ಗುಂಪು ಕೋತಿಗಳ ಗುಂಪಿನಲ್ಲಿನ ಒಂದು ಕೋತಿಯನ್ನು ಕೊಂದ ಸೇಡಿಗಾಗಿ ಈ ಕೃತ್ಯವೆಸಗಿವೆ ಎನ್ನುತ್ತಿದ್ದಾರೆ ಗ್ರಾಮಸ್ಥರು. ನಾಯಿಮರಿಗಳನ್ನು ತೆಗೆದುಕೊಂದು ಎತ್ತರದ ಮರದ, ಮನೆಯ ಮೇಲಿಂದ ಎಸೆಯುತ್ತಿದ್ದವಂತೆ. ಇವುಗಳ ಸೇಡಿಗೆ ಸುಮಾರ 250 ನಾಯಿಮರಿಗಳನ್ನು ಕೊಂದಿವೆಯಂತೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಗೆ ಹೇಳಿದರೂ ಕೋತಿ ಹಿಡಿಯಲು ಆಗಿರಲಿಲ್ಲ. ಬೀಡ್ ಅರಣ್ಯಾಧಿಕಾರಿಗಳು ಕೋತಿಗಳನ್ನು ಹಿಡಿದು ನಾಗ್ಪುರ ಅರಣ್ಯದಲ್ಲಿ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಕೋತಿಗಳಿಗೂ ಇಷ್ಟೊಂದು ಸೇಡು ಇರುತ್ತಾ ಅನ್ನೋ ದೊಡ್ಡ ಪ್ರಶ್ನೆ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!