ಸಾಯಿ ಪಲ್ಲವಿ ಸಿಟ್ಟಿಗೆ ಕಾರಣವಾಯ್ತು ಆ ಪದ

381

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿಯರಲ್ಲಿ ಸಾಯಿ ಪಲ್ಲವಿ ಒಬ್ಳು. ಯಾವುದೇ ಪಾತ್ರ ಇರಲಿ, ಅದ್ಭುತವಾಗಿ ನಟಿಸುವ ನಟಿ, ಮೂಲತಃ ತಮಿಳುನಾಡಿನವಳು. ಹುಟ್ಟಿ ಬೆಳೆದಿದ್ದು ಸಹ ತಮಿಳುನಾಡಿನಲ್ಲಿ.

ತಮಿಳು ಮೂಲದ ನಟಿ ಸಿನಿ ಪಯಣ ಶುರು ಮಾಡಿದ್ದು ಮಾತ್ರ ಮಲಯಾಳಂ ಚಿತ್ರದ ಮೂಲಕ. ಪ್ರೇಮಂ ಮೂವಿಯಿಂದ ನಟಿ ಸಾಯಿ ಪಲ್ಲವಿ ಸಿನಿ ಕರಿಯರ್ ಶುರುವಾಯ್ತು. ಅಲ್ಲಿಂದ ತಮಿಳು, ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಂಡ್ಳು.

ಆದ್ರೆ, ಇತ್ತೀಚೆಗೆ ನಟಿ ಸಾಯಿ ಪಲ್ಲವಿಗೆ, ಸಂದರ್ಶಕಿಯೊಬ್ಬರು ಮಲ್ಲು ಕುಟ್ಟಿ(ಮಲಯಾಳಿ ಹುಡ್ಗಿ) ಎಂದು ಕರೆದ್ರು. ಇದ್ರಿಂದ ಸಿಟ್ಟಾದ ನಟಿ, ನಾನು ಮಲ್ಲು ಕುಟ್ಟಿ ಅಲ್ಲ. ತಮಿಳು ಪೊಣ್ಣು( ತಮಿಳು ಹೆಣ್ಮಗಳು) ಎಂದು ಹೇಳಿದ್ಳು. ನನ್ಗೆ ಮಲಯಾಳಿ ಮಾತ್ನಾಡಕ್ಕೆ ಬರುತ್ತೆ. ಆದ್ರೆ, ನಾನು ತಮಿಳುನಾಡಿನವಳು ಎನ್ನುವ ಮೂಲಕ, ಸಿನಿ ಪಯಣ ಶುರು ಮಾಡಿದ್ದು ಮಾಲಿವುಡ್ ಆಗಿದ್ರೂ ಮೂಲ ಟಾಲಿವುಡ್ ಎಂದಿದ್ದಾಳೆ. ಇದನ್ನ ಕನ್ನಡ ಕೆಲ ನಟಿಯರು ಕಲಿಯಬೇಕಿದೆ.




Leave a Reply

Your email address will not be published. Required fields are marked *

error: Content is protected !!