ಬ್ರೇಕಿಂಗ್ ನ್ಯೂಸ್
Search

ಲಿಟಲ್ ಮಾಸ್ಟರ್ ನಾನ್ ಸ್ಟ್ರೈಕ್ ಆಟ ಶುರು ಮಾಡಿದ್ಯಾಕೆ? ದಾದಾ ಹೇಳಿದ ಇಂಟ್ರಸ್ಟಿಂಗ್ ಸಂಗತಿ

354

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವಿಶ್ವ ಕ್ರಿಕೆಟ್ ಅಂಗಳದಲ್ಲಿ ಲಿಟಲ್ ಮಾಸ್ಟರ್ ಸಚಿನ ತೆಂಡೂಲ್ಕರ್ ಹಾಗೂ ದಾದಾ ಸೌರವ ಗಂಗೂಲಿ ಜೋಡಿ ಎವರ್ ಗ್ರೀನ್. ಈ ಆರಂಭಿಕ ಜೋಡಿ ವರ್ಲ್ಡ್ ರೆಕಾರ್ಡ್ ಮಾಡಿದೆ. 176 ಪಂದ್ಯಗಳಲ್ಲಿ ಓಪನರ್ ಆಡಿದ ಜೋಡಿ ಬರೋಬ್ಬರಿ 8,227 ರನ್ ಗಳಿಸಿದೆ. ಹೀಗಾಗಿ ಇವರನ್ನ ಏಕದಿನ ಕ್ರಿಕೆಟ್ ನ ಯಶಸ್ವಿ ಜೋಡಿ ಅನ್ನೋದು.

ಇಷ್ಟೆಲ್ಲ ಪಂದ್ಯವಾಡಿ ಸಾಕಷ್ಟು ವರ್ಲ್ಡ್ ರೆಕಾರ್ಡ್ ಮಾಡಿರುವ ಸಚಿನ ತೆಂಡೂಲ್ಕರ್, ನಾನ್ ಸ್ಟ್ರೈಕರ್ ಮೂಲಕ ಆಟ ಶುರು ಮಾಡ್ತಿದಿದ್ದು ಯಾಕೆ ಅನ್ನೋ ಕುತೂಹಲವಾದ ಸಂಗತಿಯನ್ನ ದಾದಾ ಬಿಚ್ಚಿಟ್ಟಿದ್ದಾರೆ. ಪ್ಲೇಯರ್ ಮಯಂಕಾ ಅಗರ್ವಾಲ್ ಜೊತೆ ನಡೆದ ಸಂದರ್ಶನದಲ್ಲಿ, ಸಚಿನ ಯಾಕೆ ಮೊದಲ ಬಾಲ್ ಎದುರಿಸ್ತಿಲ್ಲ ಅನ್ನೋದು ಹೇಳಿದ್ದಾರೆ.

ಮೊದಲ ಎಸೆತ ಎದುರಿಸಲು ಹೇಳಿದಾಗಲೂ ಸಚಿನ ಬಳಿ ಎರಡು ಉತ್ತರಗಳು ಇರುತ್ತಿದ್ದವು. ಒಂದು ಹಿಂದಿನ ಪಂದ್ಯದ ಫಾರ್ಮ್ ಮುಂದುವರೆಸಲು, ಎರಡನೆಯದು ಹಿಂದಿನ ಪಂದ್ಯದ ಕಳಪೆ ಆಟದ ಒತ್ತಡ ಕಡಿಮೆ ಮಾಡಿಕೊಳ್ಳಲು ಎಂದು ಹೇಳ್ತಿದ್ರಂತೆ.

ಇನ್ನು ಕೆಲವೊಮ್ಮೆ ಸಚಿನಗಿಂತ ಮೊದ್ಲೇ ನಾನು ಕ್ರೀಸ್ ಗೆ ಹೋಗಿ ನಾನ್ ಸ್ಟ್ರೈಕ್ ನಲ್ಲಿ ನಿಂತುಕೊಳ್ತಿದ್ದೆ. ಅದು ಟಿವಿ ಪರದೆ ಮೇಲೆ ಸಹ ಕಾಣ್ತಿತ್ತು. ಆದ್ರೂ, ಸಚಿನ ಬಂದು ನನ್ನನ್ನು ಸ್ಟ್ರೈಕ್ ಗೆ ಕಳುಹಿಸ್ತಿದ್ರು ಎಂದು ಹೇಳುವ ಮೂಲಕ, ದಾಖಲೆಯ ಸರದಾರ ಯಾಕೆ ಪಂದ್ಯದ ಮೊದಲ ಎಸೆತ ಎದುರಿಸುತ್ತಿರಲಿಲ್ಲವೆನ್ನುವುದನ್ನ ಬಿಚ್ಚಿಟ್ಟಿದ್ದಾರೆ. ಇದು ಸಚಿನ ನಂಬಿಕೆಯಾಗಿತ್ತು ಎಂದು ದಾದಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!