ಜನ್ಮ ದಿನವೇ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡ್ ನಲ್ಲಿ ಕ್ರಿಕೆಟ್ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ತಮ್ಮ 35ನೇ ಹುಟ್ಟು ಹಬ್ಬದ ದಿನವೇ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದರು. ಐಸಿಸಿ ಏಕದಿನ ವಿಶ್ವಕಪ್ ನ ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49ನೇ ಶತಕ ಬಾರಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದರು.

ಬೌಲಿಂಗ್ ಪಿಚ್ ನಲ್ಲಿ ರನ್ ಗಳಿಸುವುದು ಕಷ್ಟವೆನ್ನುವ ಹೊತ್ತಿನಲ್ಲಿ ಟೀಂ ಇಂಡಿಯಾ ಆಟಗಾರರು ಬ್ಯಾಟ್ ಬಿಸಿ 326 ರನ್ ಗಳಿಸಿದರು. ಆರಂಭದಲ್ಲಿ ನಾಯನ ರೋಹಿತ್ ಶರ್ಮಾ ಅಬ್ಬರಿಸಿ 40 ರನ್ ಗಳಿಸಿ ಔಟ್ ಆದರು. ಗಿಲ್ 23 ರನ್ ಗಳಿಸಿ ವಿಫಲವಾದರು. ಇನ್ನೊಂದು ಬದಿಯಲ್ಲಿ ನಿಂತಿದ್ದ ಕೊಹ್ಲಿ ತಾಳ್ಮೆಯ ಆಟವಾಡಿ ತಂಡವನ್ನು 300ರ ಗಡಿ ದಾಟುವಲ್ಲಿ ಯಶಸ್ವಿಯಾದರು. ಕೊಹ್ಲಿ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಭರ್ಜರಿ 77 ರನ್ ಗಳಿಸಿ ತಂಡಕ್ಕೆ ಆಸರೆಯಾಗಿ ನಿಂತರು.

ಕೆ.ಎಲ್ ರಾಹುಲ್ 8, ಸೂರ್ಯಕುಮಾರ್ ಯಾದವ್ 22 ರನ್ ಗಳಿಸಿ ಔಟ್ ಆದರು. ಜಡೇಜಾ ಅಜೇಯ 29 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೂಲ್ ಆಗಿ ಆಡಿ 121 ಬೌಲ್ ಗಳಲ್ಲಿ ಅಜೇಯ 101 ರನ್ ಗಳಿಸಿ 49ನೇ ಶತಕ ಗಳಿಸಿದರು. 277 ಏಕದಿನ ಪಂದ್ಯಗಳಿಂದ 49ನೇ ಶತಕ ಬಂದಿತು. ಸಚಿನ್ 452 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಸೌಥ್ ಆಫ್ರಿಕಾ ಪರ ನಿಗಡಿ, ಜಾನ್ಸನ್, ರಬ್ಡಾ, ಕೇಶವ್ ಮಹಾರಾಜ್, ತಬರ್ಜ್ ಶಮಸಿ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!