ಸಿಚಿನ್ ದಾಖಲೆ ಉಡೀಸ್.. ಕೊಹ್ಲಿ ಶತಕಗಳ ಅರ್ಧಶತಕ

305

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 2023 ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಕಿಂಗ್ ಕೊಹ್ಲಿ ಭರ್ಜರಿ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 49 ಶತಕಗಳ ದಾಖಲೆಯನ್ನು ಉಡೀಸ್ ಮಾಡಿದರು.

ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಿಂದ 49 ಶತಕಗಳನ್ನು ಬಾರಿಸಿ ಮೊದಲ ಸ್ಥಾನದಲ್ಲಿದ್ದರು. ಇದನ್ನು ವಿರಾಟ್ ಕೊಹ್ಲಿ 290 ಪಂದ್ಯಗಳಲ್ಲಿಯೇ ಮುರಿಯುವ ಮೂಲಕ ರನ್ ಮಿಷನ್ ಎನ್ನುವುದನ್ನು ಸಾಬೀತು ಪಡಿಸಿದರು. ಇದರೊಂದಿಗೆ ಕಿಂಗ್ ಕೊಹ್ಲಿ ವಿಶ್ವ ದಾಖಲೆ ಬರೆದರು. 200 ಟೆಸ್ಟ್ ಗಳಿಂದ ಸಚಿನ್ 51 ಶತಕ ಗಳಿಸಿ ಎರಡೂ ಮಾದರಿಯಿಂದ ಶತಕಗಳ ಶತಕ ಮಾಡಿದ್ದಾರೆ. ಕೊಹ್ಲಿ 111 ಟೆಸ್ಟ್ ಪಂದ್ಯಗಳಿಂದ 29 ಶತಕಗಳಿಸಿದ್ದಾರೆ.

ಕೊಹ್ಲಿಯ ಏಕದಿನ ಪಂದ್ಯಗಳಲ್ಲಿ ಶತಕಗಳ ಅರ್ಧಶಕತವನ್ನು ಸಚಿನ್ ತೆಂಡೂಲ್ಕರ್, ಬಿಸಿಸಿಐ ಪ್ರಧಾನಕಾರ್ಯದರ್ಶಿ ಜೈ ಶಾ, ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಎಲ್ಲರೂ ಕಣ್ತುಂಬಿಕೊಂಡು ಶುಭ ಕೋರಿದರು.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ಭರ್ಜರಿ ಆಟ ಪ್ರಾರಂಭಿಸಿದರು. 4 ಸಿಕ್ಸ್, 4 ಫೋರ್ ಗಳೊಂದಿಗೆ 29 ಬೌಲ್ ಗಳಲ್ಲಿ 47 ರನ್ ಗಳಿಸಿ ಔಟ್ ಆದರು. 79 ರನ್ ಗಳೊಂದಿಗೆ ಆಡುತ್ತಿದ್ದ ಗಿಲ್ ಗಾಯದ ಸಮಸ್ಯೆಯಿಂದ ಅರ್ಧಕ್ಕೆ ಮರಳಿದರು. ನಂತರ ಬಂದ ಶ್ರೇಯಸ್ ಅಯ್ಯರ್ ಸಹ ಸಿಕ್ಸ್, ಫೋರ್ ಗಳ ಸುರಿಮಳೆ ಸುರಿಸಿ ಆಡುವ ಮೂಲಕ ಕೊಹ್ಲಿಗೆ ಸಾಥ್ ನೀಡಿದ್ದಾರೆ. ಅಲ್ಲದೇ ಅರ್ಧ ಶತಕ ಬಾರಿಸಿ ಆಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!