ಇನ್ನು ಸೆಮಿ ಫೈನಲ್ ಕದನ

267

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಅಜೇಯ ಓಟ ಮುಂದುವರೆಸಿದೆ. ಇನ್ನು ಎರಡು ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟರೆ ಮೂರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಲಿದೆ. ಭಾನುವಾರ ಲೀಗ್ ನ ತನ್ನ ಕೊನೆಯ ಪಂದ್ಯವಾಡಿದ ಭಾರತ ನೆಂದರ್ ಲ್ಯಾಂಡ್ ವಿರುದ್ಧ ಭರ್ಜರಿ 160 ರನ್ ಗಳಿಂದ ಜಯ ಸಾಧಿಸಿ, ಒಂಬತ್ತೂ ಪಂದ್ಯಗಳನ್ನು ಗೆದ್ದು ಬೀಗಿದೆ.

ಇನ್ನು ಟೂರ್ನಿಯಲ್ಲಿ 410 ರನ್ ಬಾರಿಸುವ ಮೂಲಕ ವಿಶ್ವಕಪ್ ನಲ್ಲಿ 400ರ ಗಡಿ ದಾಟಿದ ಮೊದಲ ತಂಡವಾಗಿದೆ. ಲೀಗ್ ನ ಎಲ್ಲ ಪಂದ್ಯಗಳು ಮುಗಿದಿದ್ದು ಎಲ್ಲರ ಕಣ್ಣು ಸೆಮಿ ಫೈನಲ್ ಮೇಲೆ ನೆಟ್ಟಿದೆ. ಮೊದಲ ಸೆಮಿ ಫೈನಲ್ ಪಂದ್ಯ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 15ರಂದು ಮುಂಬೈನಲ್ಲಿ ನಡೆಯಲಿದೆ.

ನವೆಂಬರ್ 16ರಂದು ಆಸ್ಟ್ರೇಲಿಯಾ ಹಾಗೂ ಸೌಥ್ ಆಫ್ರಿಕಾ ನಡುವೆ ಕದನ ನಡೆಯಲಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಎಲ್ಲ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳ ಆಸೆಯೂ ಇದೆಯಾಗಿದೆ.
Leave a Reply

Your email address will not be published. Required fields are marked *

error: Content is protected !!