ಮೈದಾನದಲ್ಲಿ ವಿಶ್ವಕಪ್ ಪಂದ್ಯ ನೋಡಿದ್ದು 12.5 ಲಕ್ಷ ಮಂದಿ

310

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದಲ್ಲಿ ನಡೆದ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿದೆ. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲು ಅಭಿಮಾನಿಗಳ ಮನದಿಂದ ಮರೆಯಾಗುವುದು ಕಷ್ಟಸಾಧ್ಯ. ಟೂರ್ನಿ ನೋಡಿದ ಪ್ರತಿಯೊಬ್ಬರು ಈ ವಿಶ್ವಕಪ್ ನೆನಪಿನಲ್ಲಿ ಉಳಿಯುತ್ತೆ.

ಭಾರತದ 10 ಸ್ಥಳಗಳಲ್ಲಿ ಟೂರ್ನಿ ನಡೆದಿದೆ. ಮೈದಾನದಲ್ಲಿಯೇ ಬರೋಬ್ಬರಿ 12.25 ಲಕ್ಷ ಜನರು ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ. ಈ ಮೂಲಕ 2015ರ ವಿಶ್ವಕಪ್ ರೆಕಾರ್ಡ್ ಬ್ರೇಕ್ ಮಾಡಲಾಗಿದೆ. ಅಂದು10.16 ಲಕ್ಷ ಜನರು ಕ್ರಿಕೆಟ್ ನೋಡಿದ್ದರು.

ಇನ್ನು ಡಿಜಿಟಿಲ್, ಟಿವಿ ವೀಕ್ಷಣೆಯಲ್ಲಿಯೂ ದಾಖಲೆ ಬರೆದಿದೆ. ಕೋಟ್ಯಾಂತರ ಜನರು ಡಿಜಿಟಲ್, ಟಿವಿ ಪರದೆಯ ಮೇಲೆ ವರ್ಲ್ಡ್ ಕಪ್ ಟೂರ್ನಿ ನೋಡಿ ಎಂಜಾಯ್ ಮಾಡಿದ್ದಾರೆ. ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ಟೂರ್ನಿ ನಡೆಯಿತು.




Leave a Reply

Your email address will not be published. Required fields are marked *

error: Content is protected !!