ಪ್ರಜಾಸ್ತ್ರ ಸಿನಿಮಾ ಡೆಸ್ಕ್
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಈಗಾಗ್ಲೇ ರಿಲೀಸ್ ಆಗಿ ಸಕಸ್ಸ್ ಆಗಿದೆ. ಇದೀಗ ಸೈಡ್ ಬಿ ರಿಲೀಸ್ ಗೆ ಸಿದ್ಧವಾಗಿದೆ. ಸಿಗದ ಪ್ರೀತಿಯೊಂದರ ಸುತ್ತ ನಡೆಯುವ ಕಥೆಗೆ ತಿರುವೊಂದು ಸಿಕ್ಕಿದೆ.
ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಸಿನಿ ಪ್ರೀಯರಿಗೆ ಇಷ್ಟವಾಗಿದೆ. ನೀಲಿ ಸಾಗರ ಕೆಂಪಾದ ಕಥೆಯೊಂದಿಗೆ ಸೈಡ್ ಬಿ ನವೆಂಬರ್ 17ರಂದು ತೆರೆಗೆ ಬರುತ್ತಿದೆ. ಟ್ರೇಲರ್ ನೋಡಿದ ಪ್ರತಿಯೊಬ್ಬರು ಸಿನಿಮಾ ನೋಡಲು ಕಾತುರರಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿ ಪರಂಪವ್ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.