13 ತಿಂಗಳ ಬಳಿಕ ಯಶಸ್ವಿಯಾಗಿ ಹೊರ ಬಂದ ಊರ್ಜಾ

215

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯ ಕಾರ್ಯಕ್ಕೆ ಇಳಿದಿದ್ದ ಊರ್ಜಾ 13 ತಿಂಗಳ ಬಳಿಕ ಯಶಸ್ವಿಯಾಗಿ ಹೊರ ಬಂದಿದೆ. ಶಿವಾಜಿ ನಗರದಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸಕ್ಕೆ ಊರ್ಜಾ ಹೆಸರಿನ ಮಷಿನ್ 2020 ಆಗಸ್ಟ್ ನಲ್ಲಿ ಎಂಟ್ರಿಯಾಗಿತ್ತು. ಅದು ಇಂದು ಹೊರ ಬಂದಿದೆ.

ಸುಮಾರು 855 ಮೀಟರ್ ಉದ್ದದ ಸುರಂಗ ಕಾಮಗಾರಿಯ ಕೆಲಸವನ್ನು 13 ತಿಂಗಳಲ್ಲಿ ಮುಗಿಸಿ ಹೊರ ಬಂದಿದೆ. ಇನ್ನು 9 ಟನಲ್ ಬೋರಿಂಗ್ ಮಷಿನ್ ಗಳು ಸುರಂಗ ಕೊರೆಯುವ ಕೆಲಸದಲ್ಲಿವೆ. ಗೊಟ್ಟಿಗೆರೆಯಿಂದ ನಾಗಾವರದ ತನಕದ 21 ಕಿಲೋ ಮೀಟರ್ ಉದ್ದದ ಕಾಮಗಾರಿ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!