ಸ್ಪಿನ್ ಮಾಂತ್ರಿಕನ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಸಚಿನ್

135

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಅವರ ಜೀವನಾಧರಿತ ‘800’ ಸಿನಿಮಾದ ಟ್ರೇಲರ್ ನ್ನು ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಮಂಗಳವಾರ ಬಿಡುಗಡೆ ಮಾಡಿದರು.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರ ಸಮಾಗಮಾ ಆಯಿತು. ಈ ವೇಳೆ ಮತ್ತೋರ್ವ ಮಾಜಿ ಆಟಗಾರ ಶ್ರೀಲಂಕಾದ ಸನತ್ ಜಯಸೂರ್ಯ ಹಾಜರಿದ್ದರು. ತಮ್ಮ ಕ್ರಿಕೆಟ್ ಬದುಕಿನ ದಿನಗಳನ್ನು ಮೆಲುಕು ಹಾಕಿದರು.

ಶ್ರೀಪತಿ ಈ ಸಿನಿಮಾದ ಚಿತ್ರಕತೆ, ನಿರ್ದೇಶನ ಮಾಡುತ್ತಿದ್ದಾರೆ. ಸೇಹನ್ ಕರುಣತಿಲಕ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಪ್ರವೀಣ್ ಕೆ.ಎಲ್ ನಿರ್ಮಾಣ ಮಾಡುತ್ತಿದ್ದಾರೆ. ಸ್ಟಾರ್ ನಟ ವಿಜಯ್ ಸೇತುಪತಿ ಸೇರಿ ಇತರರು ಮುತ್ತಯ್ಯ ಮುರಳೀಧರನ್ ರೋಲ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!