ವಿದ್ಯಾರ್ಥಿಗಳಿಗೆ ಸರಿಯಾದ ರೂಪ ಕೊಡುವವನು ಶಿಕ್ಷಕ: ಆರ್.ಡಿ ಪಾಟೀಲ

365

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಣ್ಣಿನ ಮುದ್ದೆಯಂತಿರುವ ವಿದ್ಯಾರ್ಥಿಗಳನ್ನು ಹದಮಾಡಿ ಹಸನುಗೊಳಿಸಿ ಸರಿಯಾದ ರೂಪ ಕೊಟ್ಟು ಒಳ್ಳೆಯ ನಾಗರೀಕರನ್ನಾಗಿ ಮಾಡುವವನು ಶಿಕ್ಷಕ ಮಾತ್ರ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು. ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಹೀಗಾಗಿ ಅವರ ಜನ್ಮ ದಿನವಾದ ಸೆಪ್ಟೆಂಬರ್ 5ರಂದು ದೇಶಾದ್ಯಂತ ಸರ್ಕಾರದಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.

ಹಿರಿಯ ಉಪನ್ಯಾಸಕ ಶಿವಶರಣ ಬೂದಿಹಾಳ ಮಾತನಾಡಿ, ಗುರು ಮತ್ತು ಶಿಕ್ಷಕ ಪರಂಪರೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ, ಶಿಕ್ಷಕರು ಮಾತ್ರ ನಮಗೆ ನಿಜವಾದ ಜೀವನ ವಿಧಾನವನ್ನು ಕಲಿಸುತ್ತಾರೆ. ಗುರು ಶಿಷ್ಯ ಸಂಪ್ರದಾಯವು ಭಾರತೀಯ ಸಂಸ್ಕೃತಿಯ ಪ್ರಮುಖ ಮತ್ತು ಪವಿತ್ರ ಭಾಗವಾಗಿದೆ ಅಂತಾ ಹೇಳಿದರು.

ಈ ವೇಳೆ ಉಪಪ್ರಾಚಾರ್ಯ ಬಿ.ಎಂ. ಸಿಂಗನಳ್ಳಿ, ಪಿ.ವಿ.ಮಹಲಿನಮಠ, ಎನ್.ಬಿ.ಪೂಜಾರಿ, ಸಂಗಮೇಶ ಚಾವರ, ಐ.ಎಸ್.ಶಿವಸಿಂಪಿಗೇರ, ರೋಹಿತ ಸುಲ್ಪಿ, ಪ್ರಸನ್ನ ಜೋಗೂರ, ಡಾ.ವಿಶ್ವನಾಥ ನಂದಿಕೋಲ, ಎಸ್.ಎಸ್.ತಾಳಿಕೋಟಿ, ಎನ್.ಎಂ.ಶೆಳ್ಳಗಿ, ಸುನೀಲ ಪಾಟೀಲ, ಗವಿಸಿದ್ದಪ್ಪ ಆನೆಗುಂದಿ, ಶರಣು ಹೂಗಾರ, ರಾಹುಲ ನಾರಾಯಣಕರ, ಸುಭಾಸ ಹೊಸಮನಿ, ಜೆಟ್ಟಿಂಗರಾಯ ಗಾಣಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!