ಶಿಕ್ಷಕರು ಯಾವುದೇ ಚಟಗಳಿಗೆ ಅಂಟಿಕೊಳ್ಳಬಾರದು: ಡಾ.ಶಂಭು ಬಳಿಗಾರ

282

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧ್ಯಾರ್ಥಿಗಳು ಶಿಕ್ಷಕರ ಅನುಕರಣೆ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ಯಾವುದೇ ಚಟಗಳಿಗೆ ಅಂಟಿಕೊಳ್ಳಬಾರದು. ಸುಂದರ ರಾಷ್ಟ್ರದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದ ಆಗಿದೆ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.

ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಸಿಂದಗಿ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿಯಿಂದ ಅನೇಕ ಸಾಧನೆಯನ್ನು ಸಾಮಾಜ ನಿರೀಕ್ಷೆ ಮಾಡುತ್ತದೆ. ಹೀಗಾಗಿ ಅವರ ನಿರೀಕ್ಷೆಯನ್ನು ಶಿಕ್ಷಕರು ಸುಳ್ಳು ಮಾಡಬಾರದು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಮೇಶ ಭೂಸನೂರ, ಗುರು ಪರಂಪರೆಯಿಂದ ನಾನು ವಿದ್ಯ, ವಿನಯ ಹಾಗೂ ಸೇವಾ ಮನೋಭಾವ ಕಲಿಯುವಂತಯಿತು ಎಂದರು.    

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಎಚ್.ಎಂ ಹರನಾಳ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಸ್.ಎಸ್ ಕತ್ನಲ್ಲಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆನಂದ ಭೂಸನೂರ, ಪ್ರೌಢ ಶಾಲೆಯ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆರ್.ಎಚ್.ಬಿರಾದಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿ.ವಿ ಆಳಗಿ ಪ್ರಾರ್ಥನೆ ಗೀತೆ ಹಾಗೂ ಜಗದೀಶ್ ಸಿಂಗೆ ರೈತ ಗೀತೆ ಹಾಡಿದರು. ಕ್ಷೇತ್ರ ಸಮನಯ್ವ ಅಧಿಕಾರಿ ಆಯ್.ಎಸ್ ಟಕ್ಕೆ ಸ್ವಾಗತಿಸಿದರು.




Leave a Reply

Your email address will not be published. Required fields are marked *

error: Content is protected !!