ಕುತೂಹಲ ಮೂಡಿಸಿದ ಗುರು ಶಿಷ್ಯರು ಟ್ರೇಲರ್

319

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಶರಣ್ ಹಾಗೂ ನಟಿ ನಿಶ್ವಿಕಾ ನಾಯ್ಡು ನಟನೆಯ ಗುರು ಶಿಷ್ಯರು ಟ್ರೇಲರ್, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಪ್ರತಿಯೊಬ್ಬರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ನಟ ಶರಣ್ ಸಿನಿಮಾ ಅಂದರೆ ಅಲ್ಲಿ ಕಾಮಿಡಿಗೆ ಬರ ಇರುವುದಿಲ್ಲ. ಅದರ ಜೊತೆಗೆ ಒಂದು ಹಳ್ಳಿಯ ಹಾಗೂ ಆ ಜನರ ಬದುಕು ಇಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯವಿದೆ. ಚಿತ್ರದಲ್ಲಿ ಒಂದು ದೊಡ್ಡ ಹೋರಾಟ, ಸಂಘರ್ಷ ಇರುವುದು ಮಾತ್ರ ಸತ್ಯ.

ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಗಾಂಧಿವಾದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿಟಿ ಮಾಸ್ಟರ್ ರೋಲ್ ನಲ್ಲಿ ಶರಣ್, ಹಳ್ಳಿಯಲ್ಲಿ ಹಾಲು ಮಾರುವ ಹುಡುಗಿಯಾಗಿ ನಶ್ಚಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ದತ್ತಣ್ಣ, ಶರಣ್ ಗುರುವಾಗಿ ನಟಿಸಿದ್ದಾರೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!