ಮತ್ತೆ ಬರ್ತಿದ್ದಾರೆ ‘ಗುರು ಶಿಷ್ಯರು’

326

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದೊಡ್ಡವರಲ್ಲ ಜಾಣರಲ್ಲ.. ಚಿಕ್ಕವರಲ್ಲ ಕೋಣರಲ್ಲ.. ಈ ಹಾಡು ಯಾರು ಕೇಳಿಲ್ಲ ಹೇಳಿ. 1995ರಲ್ಲಿ ಬಂದ ಗುರು ಶಿಷ್ಯರು ಚಿತ್ರದ ಅತ್ಯಂತ ಪ್ರಸಿದ್ಧ ಹಾಡು ಇದು. ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ, ವಿಷ್ಣುವರ್ಧನ, ಮಂಜುಳಾ ಸೇರಿದಂತೆ ಬಹುದೊಡ್ಡ ತಾರಾಬಳಗ ಇರುವ ಚಿತ್ರ ಅತ್ಯಂತ ಯಶಸ್ವಿ ಕಂಡಿತು.

25 ವರ್ಷಗಳ ಬಳಿಕ ಇದೀಗ ಅದೆ ಹೆಸರಿನೊಂದಿಗೆ ಹೊಸ ಹುಡ್ಗರು ಸೇರಿ ಸಿನಿಮಾ ಮಾಡ್ತಿದ್ದಾರೆ. ಇದರ ಮೊದಲ ಪೋಸ್ಟರ್ ನ್ನ ಹಿರಿಯ ನಟ ದ್ವಾರಕೀಶ ಅವರು ಬಿಡುಗಡೆ ಮಾಡಿದ್ದಾರೆ. ಜಡೇಶ ಕೆ ಹಂಪಿ ನಿರ್ದೇಶನ ಮಾಡ್ತಿದ್ದು, ಲಡ್ಡು ಸಿನಿಮಾ ಹೌಸ್ ಹಾಗೂ ತರುಣ ಸುಧೀರ ಕ್ರಿಯೇಟಿವಸ್ ಸಿನಿಮಾ ಮೂಡಿ ಬರ್ತಿದೆ. ಶರಣ ಕೃಷ್ಣ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!