ಲೋಕಸಭೆ ಚುನಾವಣೆ, ಹೆಸರು ಬದಲಾವಣೆಯ ದಾಳ!

152

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ಇದೀಗ ಚರ್ಚೆಯಲ್ಲಿರುವುದು ಇಂಡಿಯಾ ಹೆಸರು ಬದಲಾಗಿ ಭಾರತ್ ಎಂದು ಮರುನಾಮಕರಣ ಮಾಡುವುದರ ಕುರಿತು. ಸಂವಿಧಾನದ ಆರ್ಟಿಕಲ್ 1ರಲ್ಲಿ ಇಂಡಿಯಾ ಹಾಗೂ ಭಾರತ ಅನ್ನೋ ಎರಡು ಹೆಸರುಗಳು ಉಲ್ಲೇಖವಿದೆ. ಈಗ ದೇಶದ ಹೆಸರು ಬದಲಾಯಿಸಬೇಕು ಅಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎನ್ನುವುದು ತಜ್ಞರ ಮಾತು. ಆದರೆ, ಬಿಜೆಪಿ ನಾಯಕರು ಈಗಲೇ ಹೆಸರು ಬದಲಾಯಿಸಿ ಬರೆಯುತ್ತಿದ್ದಾರೆ.

2016ರಲ್ಲಿಯೇ ಸುಪ್ರೀಂ ಕೋರ್ಟ್ ಸಹ ಇಂಡಿಯಾ, ಭಾರತ ಎರಡೂ ಹೆಸರನ್ನು ಬಳಸಬಹುದು ಎಂದಿದೆ. ಇಂದಿಗೂ ಸಹ ನಾವು ಸರ್ಕಾರಿ ದಾಖಲೆಗಳಲ್ಲಿ ಭಾರತ ಸರ್ಕಾರ ಎಂದೇ ಬರೆಯಲಾಗುತ್ತಿದೆ. ಹೀಗಿರುವಾಗ ಈಗ ಭಾರತ್ ಎಂದು ಬದಲಾಯಿಸಲು ಹೊರಟಿರುವುದರ ಹಿಂದಿನ ಉದ್ದೇಶ ಲೋಕಸಭಾ ಚುನಾವಣೆ ಎನ್ನುವುದು ರಾಜಕೀಯ ಪಂಡಿತರ ವಾದ.

ವಿಪಕ್ಷಗಳು ತಮ್ಮ ಟೀಂಗೆ ಇಂಡಿಯಾ ಎಂದು ಕರೆದುಕೊಂಡಿವೆ. ಹೀಗಾಗಿ ಬಿಜೆಪಿ ಇದನ್ನು ಸಹಿಸದೆ ಭಾರತ್ ಎಂದು ಮರುನಾಮಕರಣ ಮಾಡುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ. ವಾಸ್ತವದಲ್ಲಿ ದೇಶದ ಪರಿಸ್ಥಿತಿಯನ್ನು ಮರೆಮಾಚಿ ಈ ರೀತಿಯ ಚರ್ಚೆಗಳನ್ನು ಹುಟ್ಟು ಹಾಕುವ ಮೂಲಕ ಮತದಾರರ ಕೇಂದ್ರವನ್ನು ಬದಲಾಯಿಸುವುದು. ಚುನಾವಣೆ ಇನ್ನೂ ಹತ್ತಿರ ಬರುತ್ತಿದ್ದಂತೆ ಈ ರೀತಿ ರಾಜಕೀಯ ದಾಳಗಳನ್ನು ಉರುಳಿಸುವ ಮೂಲಕ ಗೆಲುವಿನ ರಣತಂತ್ರಗಳನ್ನು ಹೆಣೆಯುವುದಾಗಿದೆ ಎಂದು ಹೇಳಲಾಗುತ್ತಿದೆ.

ದಿನಗಳು ಉರುಳಿದಂತೆ ಪ್ರಧಾನಿ ಮೋದಿ ಅವರು ವರ್ಚಸ್ ಕಡಿಮೆಯಾಗುತ್ತಿದೆ. ಮೊದಲಿದ್ದಷ್ಟು ಆಕರ್ಷಣೆ, ಒಲವು ಈಗಿಲ್ಲ. ಹಿಂದಿನ ಚುನಾವಣೆಯಲ್ಲಿ ಮೋದಿ ಹೆಸರಿನೊಂದಿಗೆ ಗೆಲುವು ಸಾಧಿಸಿದ ಅದೆಷ್ಟೋ ಬಿಜೆಪಿ ನಾಯಕರಿಗೆ ಈ ಬಾರಿ ಸೋಲಿನ ಭಯ ಕಾಣಿಸಿಕೊಂಡಿದೆ. ಹೀಗಾಗಿ ವಿಪಕ್ಷಗಳು ಮೇಲುಗೈ ಸಾಧಿಸದಂತೆ ಮಾಡಲು ಈ ರೀತಿಯ ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಿ ಗೆಲುವಿನ ಹಾದಿ ತುಳಿಯಬಹುದು ಅನ್ನೋದು ಬಿಜೆಪಿ ಲೆಕ್ಕಾಚರವಿದ್ದಂತೆ ಕಾಣುತ್ತದೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಇನ್ನು ಏನೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದು ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!