ಏರೋ ಇಂಡಿಯಾ ಉದ್ಘಾಟಿಸಲು ಸಂಜೆ ಬೆಂಗಳೂರಿಗೆ ಪ್ರಧಾನಿ

292

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಧಾನಿ ಮೋದಿ ರಾಜ್ಯಸ್ಥಾನದ ಪ್ರವಾಸ ಮುಗಿಸಿಕೊಂಡು ಇಂದು ಸಂಜೆ ಸಿಲಿಕಾನ್ ಸಿಟಿಗೆ ಆಗಮಿಸಲಿದ್ದಾರೆ. ಸೋಮವಾರ ಮುಂಜಾನೆ ಏರೋ ಇಂಡಿಯಾ-2023 14ನೇ ಆವೃತ್ತಿ ಉದ್ಘಾಟಿಸಲಿದ್ದಾರೆ. ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸಂಜೆ 7.40ಕ್ಕೆ ಆಗಮಿಸಲಿದ್ದಾರೆ.

ರಾತ್ರಿ ರಾಜಭವನದಲ್ಲಿ ಪ್ರಧಾನಿ ಉಳಿದುಕೊಳ್ಳಲಿದ್ದಾರೆ. ಸೋಮವಾರ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ 14ನೇ ಆವತ್ತಿಯನ್ನು ಮುಂಜಾನೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಮೇಲಿಂದ ಮೇಲೆ ಪ್ರಧಾನಿಯ ಆಗಮನವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!