ಏರೋ ಇಂಡಿಯಾ ಪ್ರದರ್ಶನ ಉದ್ಘಾಟಿಸಿದ ಪ್ರಧಾನಿ

236

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಧಾನಿ ಮೋದಿ ಅವರು ಏರೋ ಇಂಡಿಯಾ-2023 14ನೇ ಆವೃತ್ತಿಯನ್ನು ಸೋಮವಾರ ಮುಂಜಾನೆ ಉದ್ಘಾಟನೆ ಮಾಡಿದರು. ಈ ಶೋ ಐದು ದಿನಗಳ ಬೆಂಗಳೂರಿನಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. 98 ದೇಶಗಳ ಪ್ರತಿನಿಧಿಗಳು, 809 ಕಂಪನಿಗಳು ಭಾಗವಹಿಸಲಿವೆ.

ನವ ಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು ದೇಶ ಹೊಸ ಎತ್ತರವನ್ನು ತಲುಪುತ್ತದೆ ಹಾಗೂ ಹೊಸದನ್ನು ದಾಖಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೇ, ಈ ಪ್ರದರ್ಶನ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್ ಗಳು, ಉಪರಕರಣಗಳು ಹಾಗೂ ಹೊಸ ಯುಗದ ಏವಿಯಾನಿಕ್ಸ್ ಗಳನ್ನು ತಯಾರಿಸುವ ಕೇಂದ್ರವಾಗಿ ದೇಶವನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದರು. ಇದೆ ವೇಳೆ ಅತಿ ದೊಡ್ಡ ಏರ್ ಶೋಗೆ ಸಂಬಂಧಿಸಿದಂತೆ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದರು.

ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,  ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಾಗೂ  ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!