ರಾಜ್ಯಸಭೆಗೆ ರಾಜ್ಯದವರಿಗೆ ಅವಕಾಶ ಸಿಗುತ್ತಾ?

436

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಅನ್ನೋದು ನೇರ ಚುನಾವಣೆ ನಡೆಸಲು ಸಾಧ್ಯವಾಗದ ವಿವಿಧ ಕ್ಷೇತ್ರಗಳ ಸಾಧಕರಿಗೆ ಅವಕಾಶ ನೀಡುವುದಾಗಿದೆ. ಆದರೆ, ಅನೇಕ ವರ್ಷಗಳಿಂದ ರಾಜಕೀಯ ಕುಟುಂಬಗಳೇ ಇಲ್ಲಿ ಸ್ಪರ್ಧಿಸಿ ಮೇಲ್ಮನೆ ಹಾಗೂ ಕೆಳ್ಮನೆಯಲ್ಲಿ ಕುಟುಂಬದವರೆ ತುಂಬಿಕೊಳ್ಳುತ್ತಿದ್ದಾರೆ. ಇನ್ನು ರಾಜ್ಯಸಭೆಗೆ ಆಯಾ ರಾಜ್ಯದವರನ್ನು ಆಯ್ಕೆ ಮಾಡಿ ಕಳಿಸುವ ಬದಲು ಹೊರ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ.

ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಇದೀಗ ಅವರು ಉತ್ತರ ಪ್ರದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ಅವರ ಸ್ಥಾನದಿಂದ ನಿರ್ಮಲಕುಮಾರ್ ಸುರಾನ್ ಸ್ಪರ್ಧೆ ಎನ್ನಲಾಗುತ್ತಿದೆ. ಕೆ.ಸಿ ರಾಮಮೂರ್ತಿ ಅವರಿಗೆ ಮತ್ತೆ ಅವಕಾಶ ಕೊಡುತ್ತಾರ, ಮತ್ತೊಬ್ಬರಿಗೆ ಟಿಕೆಟ್ ನೀಡಲಾಗುತ್ತಾ ಕಾದು ನೋಡಬೇಕು. ಕಾಂಗ್ರೆಸ್ ನಿಂದ ಜಯರಾಮ್ ರಮೇಶ್ ಮತ್ತೆ ಸ್ಪರ್ಧಿಸುವ ಸಾಧ್ಯತೆಯಿದೆ.

ಇನ್ನು ಜೆಡಿಎಸ್ ನಿಂದ ಕುಪೇಂದ್ರರೆಡ್ಡಿ ಹೆಸರು ಕೇಳಿ ಬರುತ್ತಿದೆ. ಆದರೆ, ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ಅಂದರೆ ರಾಷ್ಟ್ರೀಯ ಪಕ್ಷವೊಂದರ ಬೆಂಬಲ ಪಡೆಯಬೇಕು. ಯಾರಿಂದ ಅನ್ನೋದು ನೋಡಬೇಕು. ಹೀಗಾಗಿ ಹೊರ ರಾಜ್ಯದವರಿಗೆ ಕರ್ನಾಟಕದಿಂದ ಆಯ್ಕೆ ಮಾಡಿ ಕಳಿಸುವ ಬದಲು ರಾಜ್ಯದವರನ್ನೇ ಆಯ್ಕೆ ಮಾಡಿ ಕಳಿಸಬೇಕಿದೆ. ಅಂದಾಗ ಸಂಸತ್ತಿನಲ್ಲಿ ಪ್ರಾದೇಶಿಕ ವಿಚಾರಗಳ ಕುರಿತು ಚರ್ಚಿಸಲು, ಧ್ವನಿ ಎತ್ತಲು, ಪರಿಹಾರವನ್ನು ತರುವಲ್ಲಿ ಹೆಚ್ಚಿನ ಸಹಾಯವಾಗುತ್ತೆ. ಇಲ್ಲದಿದ್ದರೆ ಹೊರ ರಾಜ್ಯದವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳು ಈ ವಿಚಾರದಲ್ಲಿ ಯೋಚಿಸಬೇಕಿದೆ.

ಮೇ 24ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ಅಂದಿನಿಂದ ಮೇ 31ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ರಾಜ್ಯದ ಯಾರಿಗೆಲ್ಲ ಅವಕಾಶ ಸಿಗಬಹುದು ಅನ್ನೋ ಪ್ರಶ್ನೆ ಇದೆ.




Leave a Reply

Your email address will not be published. Required fields are marked *

error: Content is protected !!