ರಾಜ್ಯಸಭೆ ಚುನಾವಣೆ: ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧೆ

113

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರೆ. ಈ ಮೂಲಕ 5ನೇ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಾಗಿದೆ. ಈ ಮೂಲಕ ಬಿಜೆಪಿ-ಜೆಡಿಎಸ್ ಹೊಸ ಲೆಕ್ಕಾಚಾರ ಹೆಣದಿದೆ.

ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜನಾರ್ದನ್ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣಯ್ಯ, ಪಕ್ಷೇತರರಾಗಿ ಗೌರಿಬಿದನೂರಿನ ಶಾಸಕ ಕೆ.ಪಿ ಪುಟ್ಟಸ್ವಾಮಿ, ಹರಪ್ಪನಹಳ್ಳಿ ಲತಾ ಮಲ್ಲಿಕಾರ್ಜುನ್ ಇದ್ದಾರೆ. ಈ ಎಲ್ಲ ಬಲಾಬಲ ನೋಡಿದರೆ ಕಾಂಗ್ರೆಸ್ 3, ಬಿಜೆಪಿ 1 ಸ್ಥಾನವನ್ನು ಸರಳವಾಗಿ ಗೆಲ್ಲುತ್ತೆ. ಆದರೆ ಜೆಡಿಎಸ್ ಅಭ್ಯರ್ಥಿ ಹಾಕುವ ಮೂಲಕ ದೋಸ್ತಿ ಪಕ್ಷಗಳು ಕಾಂಗ್ರೆಸ್ ಗೆ ಟೆನ್ಷನ್ ನೀಡಿವೆ.

ಒಬ್ಬರ ಗೆಲುವಿಗೆ 45 ಮತಗಳು ಬೇಕು. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಶಾಸಕರ ಜೊತೆಗೆ ಇಬ್ಬರು ಪಕ್ಷೇತರರು, ಇಬ್ಬರು ಇತರೆ ಪಕ್ಷದವರು ಜೊತೆಗೆ ಕಾಂಗ್ರೆಸ್ ನಿಂದ ಒಂದಿಬ್ಬರ ಕಡೆಯಿಂದ ಅಡ್ಡ ಮತದಾನ ಮಾಡಿಸಿದರೆ ಆಡಳಿತರೂಢ ಕಾಂಗ್ರೆಸ್ ಗೆ ಹೊಡೆತ ಕೊಡುವ ಲೆಕ್ಕಾಚಾರ. ಇದು ಎಷ್ಟು ಯಶಸ್ವಿಯಾಗುತ್ತೆ ಅನ್ನೋದು ಫೆಬ್ರವರಿ 27ಕ್ಕೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!