ಇಂದು ವಿಕ್ರಾಂತ್ ರೋಣ ಹಾಡು ಬಿಡುಗಡೆ

366

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ವಿಕ್ರಾಂತ್ ರೋಣ ಈಗಾಗ್ಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಈಗಾಗ್ಲೇ ಕನ್ನಡದ ಚಿತ್ರಗಳು ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಆ ಸಾಲಿಗೆ ಇದೀಗ ವಿಕ್ರಾಂತ್ ರೋಣ ಸಹ ಸೇರಿಕೊಳ್ಳುತ್ತಿದ್ದು, ಇಂದು ಗಡಂಗ್ ರಕ್ಕಮ್ಮ ಹಾಡು ರಿಲೀಸ್ ಆಗುತ್ತಿದೆ. ಇಂದು ಮಧ್ಯಾಹ್ನ 3.5ಕ್ಕೆ ಹಾಡು ಬಿಡುಗಡೆಯಾಗುತ್ತಿದೆ.

ಕನ್ನಡದಲ್ಲಿ ಇಂದು ಸಾಂಗ್ ರಿಲೀಸ್ ಆಗುತ್ತಿದೆ. ಮೇ 24ರಂದು ಹಿಂದಿ, ಮೇ 25 ತೆಲುಗು, ಮೇ 26 ತಮಿಳು ಹಾಗೂ ಮೇ 27ಕ್ಕೆ ಮಲಯಾಳಂನಲ್ಲಿ ಹಾಡು ಬಿಡುಗಡೆಯಾಗುತ್ತಿದೆ. ಹೀಗಾಗಿ ಕಿಚ್ಚಿನ ಅಭಿಮಾನಿಗಳ ಕ್ರೇಜ್ ಹೆಚ್ಚಾಗಿದೆ.

ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಜಾಕ್ ಮಂಜು, ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ವಿಲಿಯಂ ಡೇವಿಡ್ ಕ್ಯಾಮೆರಾ, ಆಶಿಕ್ ಕುಸುಗಳ್ಳಿ ಎಡಿಟಿಂಗ್ ಇದೆ. ಜುಲೈ 28ರಂದು ಸಿನಿಮಾ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!