ಕ್ಯಾನ್ಸರ್ ವಿರುದ್ಧ ಇರ್ಫಾನ್ ಖಾನ್ ಹೋರಾಟ.. ಈತನ ಹೊಸ ಚಿತ್ರಕ್ಕೆ ಬಿಟೌನ್ ಸಾಥ್

415

ಬಾಲಿವುಡ್ ಅಂಗಳದ ಪ್ರಬುದ್ಧ ನಟರಲ್ಲಿ ನಟ ಇರ್ಫಾನ್ ಖಾನ್ ಸಹ ಒಬ್ಬ. ಸದಾ ಹೊಸತನ, ವಿಭಿನ್ನ ಪಾತ್ರಗಳಿಗೆ ತಮ್ಮನ್ನ ತಾವು ತೊಡಗಿಸಿಕೊಳ್ಳುವ ನಟ. ಇಂಥಾ ನಟ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾನ್ಸರ್ ರೋಗದಿಂದ ನಟ ಇರ್ಫಾನ್ ಖಾನ್ ಗುಣಮುಖರಾಗ್ತಿದ್ದು, ಅವರ ನಟನೆಯ ‘ಅಂಗ್ರೇಜಿ ಮೀಡಿಯಂ’ ಚಿತ್ರದ ಸಾಂಗ್ ರಿಲೀಸ್ ಮಾಡಲಾಗಿದೆ. ಇದರ ಪ್ರಮೋಷನ್ ಗಾಗಿ ಚಿತ್ರತಂಡ ಓಡಾಡ್ತಿದೆ. ನಟಿ ಕರೀನಾ ಕಪೂರ್, ರಾಧಿಕಾ ಮದನ್, ದೀಪಕ ದೊಬ್ರಿಯಾಲ್, ಡಿಂಪಲ್ ಕಪಾಡಿಯಾ ನಟಿಸಿದ್ದು, ಚಿತ್ರದ ಪ್ರಮೋಷನ್ ಕೆಲಸ ಮಾಡ್ತಿದ್ದಾರೆ. ಆದ್ರೆ, ನಟ ಇರ್ಫಾನ್ ಖಾನ್ ಗೆ ಇದು ಸಾಧ್ಯವಾಗ್ತಿಲ್ಲ.

ಇತ್ತ ಬಾಲಿವುಡ್ ಅಂಗಳದ ಇತರೆ ಕಲಾವಿದರು, ಇರ್ಫಾನ್ ಖಾನ್ ಪರವಾಗಿ ‘ಅಂಗ್ರೇಜಿ ಮೀಡಿಯಂ’ ಚಿತ್ರದ ಪ್ರಮೋಷನ್ ಕೆಲಸ ಮಾಡ್ತಿದ್ದಾರೆ. ನಟಿ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ಆಲಿಯಾ ಭಟ್, ಜಾಹ್ನವಿ ಕಪೂರ್ ಸೇರಿ ಅನೇಕರು ಚಿತ್ರದ ‘ಕುದಿನು ನಾಚನೇ ದೇ’ ಅನ್ನೋ ಹಾಡಿಗೆ ಸ್ಟೆಪ್ ಹಾಕಿ ಷೇರ್ ಮಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡ್ತಿದ್ದಾರೆ. ಈ ಮೂಲಕ ನಟ ಇರ್ಫಾನ್ ಖಾನ್ ಪರ ಚಿತ್ರದ ಪ್ರಚಾರ ನಡೆಸಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ.




Leave a Reply

Your email address will not be published. Required fields are marked *

error: Content is protected !!