ಸದ್ದು ಮಾಡ್ತಿದೆ ‘ಸ್ವೀಟಿ’ಯ ನಿಶಬ್ಧಂ ಟ್ರೇಲರ್

784

ನಟಿ ಅನುಷ್ಕಾ ಶೆಟ್ಟಿ, ಭಾಗಮತಿ ಸಿನಿಮಾ ಬಳಿಕ ಯಾವುದೇ ಹೊಸ ಚಿತ್ರಗಳಲ್ಲಿ ನಟಿಸಿರ್ಲಿಲ್ಲ. ಹೀಗಾಗಿ ಆಕೆಯ ಫ್ಯಾನ್ಸ್ ಗೆ ಒಂದಿಷ್ಟು ಬೇಸರವಾಗಿತ್ತು. ಇದೀಗ ನಿಶಬ್ಧಂ ಚಿತ್ರದ ಮೂಲಕ ಸ್ವೀಟಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಿದ್ದಾಳೆ. ಅದರ ಟ್ರೇಲರ್ ರಿಲೀಸ್ ಆಗಿದೆ.

ನಟಿ ಅನುಷ್ಕಾ ಶೆಟ್ಟಿ ನಟನೆಯ ನಿಶಬ್ಧಂ ಚಿತ್ರದ ಟ್ರೇಲರ್ ಸಾಕಷ್ಟು ಸೌಂಡ್ ಮಾಡ್ತಿದೆ. ಮಾತು ಬಾರದ ಚಿತ್ರ ಕಲಾವಿದೆ ಗೆಟಪ್ ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾಳೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಹಾರರ್ ಟಚ್ ನೀಡಲಾಗಿದೆ. ಹೀಗಾಗಿ ಒಂದಿಷ್ಟು ಕುತೂಹಲ ಮೂಡಿಸಿದೆ.

ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗ್ತಿದೆ. ಇಂಗ್ಲಿಷ್ ಹೊರತು ಪಡಿಸಿ ಉಳಿದ ಭಾಷೆಗಳ ಟ್ರೇಲರ್ ಬಿಡುಗಡೆಯಾಗಿದೆ. ನಟ ಮಾಧವನ್, ಅರ್ಜುನ್ ರೆಡ್ಡಿ ಖ್ಯಾತಿಯ ಅಂಜಲಿ ಸಹ ಲೀಡ್ ರೋಲ್ ಮಾಡಿದ್ದಾರೆ. ಹೇಮಂತ ಮಧುಕರ್ ನಿರ್ದೇಶನದ ಚಿತ್ರ ಒಂದಿಷ್ಟು ನಿರೀಕ್ಷೆಗಳನ್ನ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!