ಗದ್ದಲ ಗಲಾಟೆ ನಡೆವೆಯೂ ಮತಾಂತರ ನಿಷೇಧ ಬಿಲ್ ಪಾಸ್

466

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ವಿರೋಧ ಪಕ್ಷಗಳ ಸಾಕಷ್ಟು ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಬಿಲ್ ಅಂಗೀಕರಿಸಲಾಗಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಕಾಯ್ದೆ 2021ಕ್ಕೆ ಅಂಗೀಕಾರ ದೊರೆತಿದೆ.

ಈ ಕಾಯ್ದೆ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು. ಸದನದ ಬಾವಿಗಿಳಿದು ಗದ್ದಲ ಗಲಾಟೆ ನಡೆಸಿದರು. ಇದರ ನಡುವೆಯೇ ಧ್ವನಿ ಮತದಾನದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ವಿಪಕ್ಷಗಳ ಗದ್ದಲದಿಂದಾಗಿ 10 ನಿಮಿಷ ಕಲಾಪ ಮುಂದೂಡಿ ನಂತರ ಆದೇಶ ಹೊರಡಿಸಲಾಯಿತು.




Leave a Reply

Your email address will not be published. Required fields are marked *

error: Content is protected !!