ಅರುಣ ಜೇಟ್ಲಿ ವಿಧಿವಶ: ರಾಷ್ಟ್ರಪತಿ, ಪಿಎಂ ಸೇರಿ ಹಲವು ಗಣ್ಯರ ಸಂತಾಪ

401

ನವದೆಹಲಿ: ಕೇಂದ್ರ ಮಾಜಿ ಸಚಿವ ಅರುಣ ಜೇಟ್ಲಿ ವಿಧಿವಶರಾಗಿದ್ದಾರೆ. 66 ವರ್ಷದ ಅರುಣ ಜೇಟ್ಲಿ ಆಗಸ್ಟ್ 9ರಂದು ನವದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ರು. ಕೆಲ ದಿನಗಳಿಂದ ಅವರ ಆರೋಗ್ಯ ಕ್ಷೀಣಿಸ್ತಿದೆ ಅನ್ನೋ ಮಾಹಿತಿ ಬರ್ತಾನೆ ಇತ್ತು. ಇಂದು ಮಧ್ಯಾಹ್ನ 12.07ಕ್ಕೆ ವಿಧಿವಶರಾಗಿರುವ ಸುದ್ದಿ ಹೊರ ಬಿದ್ದಿದೆ.

ಏಮ್ಸ್ ಪ್ರಕಟಣೆ

ನವದೆಹಲಿಯ ಏಮ್ಸ್ ಆಸ್ಪತ್ರೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಡಿಸೆಂಬರ್ 28, 1952ರಲ್ಲಿ ಜನಿಸಿದ್ದ ಅರುಣ ಜೇಟ್ಲಿ, ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ರು. ಮೋದಿ ನೇತೃತ್ವದ ಎನ್ ಡಿಎ ಒಂದರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿರ್ಲಿಲ್ಲ. ಜೇಟ್ಲಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!