ಸಿಂದಗಿ ಕೆರೆಗೆ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ

401

ಸಿಂದಗಿ: ಪಟ್ಟಣದ ಜಲಶುದ್ಧಿಕರಣ ಘಟಕದ ಆವರಣದಲ್ಲಿಂದು, ಸಿಂದಗಿ ಪಟ್ಟಣಕ್ಕೆ ಬಳಗಾನೂರ ಕೆರೆಯಿಂದ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯ್ತು. ಅಂದಾಜು 27.10 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ನಗರಾಭಿವೃದ್ಧಿ ಸಚಿವರಾದ ಯು.ಟಿ ಖಾದರ್ ಅವರು ಚಾಲನೆ ನೀಡಿದ್ರು.

ಈ ಯೋಜನೆಯು ಸಿಂದಗಿ ನಗರದಲ್ಲಿ ಮುಂಬರುವ 2035ರಲ್ಲಿ ಇರಬಹುದಾದ 67 ಸಾವಿರ ಜನಸಂಖ್ಯೆ ಹಾಗೂ 2050ರಲ್ಲಿ ಇರಬಹುದಾದ 97,700 ಜನಸಂಖ್ಯೆಯನ್ನ ಅಂದಾಜಿಸಿ ರೂಪಿಸಲಾಗಿದ್ದು, ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿದೆ.

ತೋಟಗಾರಿಕೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ ಮನಗೂಳಿ ಅವರ ನೇತೃತ್ವದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಸಚಿವ ಮನಗೂಳಿ ಅವರು ಸರ್ಕಾರಕ್ಕೆ ಅನುಮೋದನೆ ಸಲ್ಲಿಸಿದ್ರು. ಇದೀಗ ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕಾರ್ಯಕಮದ ಅಧ್ಯಕ್ಷತೆಯನ್ನ ಸಚಿವ ಎಂ.ಸಿ ಮನಗೂಳಿ ಅವರು ವಹಿಸಿಕೊಂಡಿದ್ರು. ಕಾಂಗ್ರೆಸ್ ಮುಖಂಡರು, ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮುಖ್ಯ ಅಭಿಯುಂತರರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!