ಮಿತಿ ಮೀರಿ ಪ್ರಯಾಣಿಕರನ್ನ ತುಂಬಿದ್ದ ಆಟೋ ಪಲ್ಟಿ

290

ಪ್ರಜಾಸ್ತ್ರ ಸುದ್ದಿ

ಹೆಚ್.ಡಿ ಕೋಟೆ: ಮಿತಿ ಮೀರಿ ಪ್ರಯಾಣಿಕರನ್ನ ತುಂಬಿಕೊಂಡು ಹೊರಟಿದ್ದ ಆಟೋವೊಂದು ಪಲ್ಟಿಯಾಗಿರುವ ಘಟನೆ ತಾರಕ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

45 ವರ್ಷದ ಶಿವಮ್ಮ ಹಾಗೂ 21 ವರ್ಷದ ವಿದ್ಯಾರ್ಥಿನಿ ರೀನಾ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಶುಂಠಿ ಕೆಲಸಕ್ಕಾಗಿ ನಾಲ್ಕು ಜನ ಪ್ರಯಾಣಿಕರಿಗೆ ಪರವಾನಿಗೆ ಇರುವ ಆಟೋದಲ್ಲಿ 13 ಮಂದಿಯನ್ನ ತುಂಬಲಾಗಿತ್ತು. ತಾರಕ ಸೇತುವೆ ಬಳಿ ರಾಸು ಅಡ್ಡ ಬಂದಾಗ ಆಟೋ ಪಲ್ಟಿ ಆಗಿದೆ.




Leave a Reply

Your email address will not be published. Required fields are marked *

error: Content is protected !!