ಮಸ್ತಾನ್ ದರ್ಗಾಕ್ಕೆ ತೆರಳಲಿದೆ ಕರಗ

349

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಸಿದ್ಧ ಕರಗ ಉತ್ಸವ ದೇಶದಲ್ಲಿ ಹೆಸರು ಮಾಡಿದೆ. ಇದರಲ್ಲಿ ಲಕ್ಷಾಂತರು ಜನರು ಭಾಗವಹಿಸುತ್ತಾರೆ. ಸಂಪ್ರದಾಯದಂತೆ ಕರಗ ಉತ್ಸವ ಕಾಟನಪೇಟೆಯಲ್ಲಿರುವ ತವಕ್ಕಲ್ ಮುಸ್ತಾನ್ ದರ್ಗಾಕ್ಕೆ ಭೇಟಿ ನೀಡಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಕುರಿತು ಕರಗ ಸಮಿತಿ, ಮಸ್ತಾನ್ ದರ್ಗಾ ಸಮಿತಿ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿತಿ ತಿಳಿಸಿವೆ. 300 ವರ್ಷಗಳ ಇತಿಹಾಸ ಇರುವ ಕರಗ, ಸಾಮರಸ್ಯದ ಸಂಕೇತವಾಗಿದೆ. ಮುಸ್ಲಿಂರು ಕರಗ ಉತ್ಸವಕ್ಕೆ ಬರುತ್ತಾರೆ. ಶಕ್ತ್ಯೋತ್ವದ ವೇಳೆ ನಮ್ಮವರು ದರ್ಗಾಕ್ಕೆ ಹೋಗುತ್ತಾರೆ. ಇದು ನೂರಾರು ವರ್ಷಗಳ ವಾಡಿಕೆ ಎಂದು ತಿಳಿಸಲಾಗಿದೆ.

ಈ ಸಾಮರಸ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮುಸ್ಲಿಂರೊಂದಿಗೆ ಧಾರ್ಮಿಕ ಕಲಹದ ಹಿನ್ನೆಲೆ ಈ ಎಚ್ಚರಿಕೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!