ಸಿಂದಗಿ ಪುರಸಭೆ ಎಲೆಕ್ಷನ್: ಯಾರಿಗೆ ಯಾವ ಪಕ್ಷದ ಟಿಕೆಟ್ ಗೊತ್ತಾ?

661

ಸಿಂದಗಿ: ಪಟ್ಟಣದ ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣೆ ಘೋಷಣೆಯಾಗಿದ್ದು ಜನವರಿ 21ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು 2 ಹಂತದ ವಿಭಾಗಗಳನ್ನ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿರುಸಿನ ರಾಜಕೀಯ ನಡೆದಿದೆ. ಪುರಸಭೆ, ತಹಶ್ಲೀದಾರ್ ಕಚೇರಿಯಲ್ಲಿ ಎಲ್ಲಿ ನೋಡಿದ್ರೂ ಅಭ್ಯರ್ಥಿಗಳ ಓಡಾಟ ಜೋರಾಗಿದೆ.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಕಣಕ್ಕೆ ಇಳಿಯಲು ಆಕಾಂಕ್ಷಿಗಳು ಉತ್ಸುಕರಾಗಿದ್ದು ಪಕ್ಷದ ನಾಯಕರೊಂದಿಗೆ ಮೇಲಿಂದ ಮೇಲೆ ಮಾತುಕತೆ ನಡೆಸಿದ್ದಾರೆ. ಇತ್ತೆ ಬಿಎಸ್ಪಿ ಆಕಾಂಕ್ಷಿಗಳ ತಯಾರಿ ಸಹ ಜೋರಾಗಿದೆ. ಬಹುತೇಕರು ತಮ್ಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಅದು ಎಷ್ಟರ ಮಟ್ಟಿಗಿದೆ ಅಂದ್ರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ ಮೂರು ದಿನಗಳಾಗಿದೆ, ಇದುವರೆಗೂ ಒಬ್ಬರೆ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿಲ್ಲ. ಬಿ ಫಾರ್ಮ್ ತಮ್ಮ ಕೈಗೆ ಬರುವ ತನಕ ನಾಮಪತ್ರ ಸಲ್ಲಿಸಬಾರದು ಅನ್ನೋ ಮಟ್ಟಕ್ಕೆ ಬಂದಿದೆ. ಹೀಗಾಗಿ ವಾರ್ಡ್ ಗೆ 10 ರಿಂದ 15 ಮಂದಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ.

ಪಕ್ಷದ ನಾಯಕರು ನಿನ್ಗೆ ಟಿಕೆಟ್ ಫಿಕ್ಸ್ ಇದೆ. ನೀ ಮೊದಲು ಹೋಗಿ ಪಕ್ಷೇತರ ಕೊಡು. ಆಮೇಲೆ ಬಿ ಫಾರ್ಮ್ ನೀಡುವಂತೆ ಎಂದು ಭರವಸೆ ನೀಡ್ತಿದ್ದಾರೆ. ಆದ್ರೆ, ನಾಯಕರ ಮಾತಿನ ಮೇಲೆ ವಿಶ್ವಾಸವಿಲ್ಲದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಹಿಂದೇಟು ಹಾಕ್ತಿದ್ದಾರೆ. ತಮ್ಗೆ ಬಿ ಫಾರ್ಮ್ ಸಿಗ್ಲಿಲ್ಲಂದ್ರೆ ಆಗ ಪಕ್ಷೇತರರಾಗಿ ಕಣಕ್ಕೆ ಇಳಿಯೋದು ಫಿಕ್ಸ್ ಎಂದು ಕೆಲ ಆಕಾಂಕ್ಷಿಗಳು ‘ಪ್ರಜಾಸ್ತ್ರ’ಕ್ಕೆ ಹೇಳಿದ್ದಾರೆ.

ಯಾರಿಗೆ ಯಾವ ಪಕ್ಷದ ಟಿಕೆಟ್ ಸಿಕ್ಕಿದೆ ಗೊತ್ತಾ ಎಂದು ಪ್ರತಿಯೊಬ್ಬರು ಕೇಳುತ್ತಾ ನಾಮಪತ್ರದ ದಾಖಲೆ ಹಿಡಿದುಕೊಂಡು ಆ ಕಡೆಯಿಂದ ಈ ಕಡೆ. ಈ ಕಡೆಯಿಂದ ಆ ಕಡೆ ತಿರುಗಾಡ್ತಿದ್ದಾರೆ. ಆದ್ರೆ, ಯಾರೊಬ್ಬರಿಗೂ ಟಿಕೆಟ್ ಕನ್ಫರ್ಮ್ ಆಗಿಲ್ಲ! ಕನ್ಫರ್ಮ್ ಆದವರು ಯಾರೂ ಬೇಕೆಂದಲೇ ನಾಮಪತ್ರ ಸಲ್ಲಿಸ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದಲ್ಲಿ ತಮ್ಮ ದಾಳ ಉರುಳಿಸಬೇಕು ಅಂತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಾನು ಕಾಂಗ್ರೆಸ್ ಆಕಾಂಕ್ಷಿ, ಬಿಜೆಪಿ ಆಕಾಂಕ್ಷಿ, ಜೆಡಿಎಸ್ ಆಕಾಂಕ್ಷಿಯೆಂದು ಫೋಟೋ ಶೇರ್ ಮಾಡ್ತಿದ್ದಾರೆ ವಿನಃ ಫಿಕ್ಸ್ ಎಂದು ಯಾರೊಬ್ಬರೂ ಹೇಳ್ತಿಲ್ಲ.




Leave a Reply

Your email address will not be published. Required fields are marked *

error: Content is protected !!