ನಾಳೆಯಿಂದ ಐಪಿಎಲ್ ಹಣಾಹಣಿ ಶುರು

295

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚುಟುಕು ಕ್ರಿಕೆಟ್ ಪ್ರೇಮಿಗಳ ಹಬ್ಬ ಐಪಿಎಲ್ ಮಾರ್ಚ್ 31ರಿಂದ ಶುರು. 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಹಮದಾಬಾದ್ ನಲ್ಲಿ ಶುರುವಾಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೀಂ ಮುನ್ನಡೆಸಲಿದ್ದಾರೆ. ಧೋನಿ ಚೆನ್ನೈ ಟೀಂ ನಾಯಕನಾಗಿದ್ದಾರೆ.

ಟೂರ್ನಿಯಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. 10 ತಂಡಗಳಿದ್ದು ಪ್ರತಿ ಟೀಂ 7 ಪಂದ್ಯಗಳಲ್ಲಿ ತವರು ರಾಜ್ಯದಲ್ಲಿ ಆಡಲಿವೆ. ಉಳಿದ ಪಂದ್ಯಗಳನ್ನು ಬೇರೆ ಕಡೆ ಆಡಲಿವೆ. ಪ್ರತಿ ತಂಡ 18 ಪಂದ್ಯಗಳನ್ನು ಆಡಲಿವೆ. ಮಾರ್ಚ್ 31ರಿಂದ ಮೇ 21ರ ತನಕ ಪಂದ್ಯಗಳು ನಡೆಯಲಿವೆ.

ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜಸ್, ಗುಜರಾತ್ ಟೈಟನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಲಖ್ನೋ ಸೂಪರ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಎಲವನ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ ಹೈದ್ರಾಬಾದ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿವೆ.

ಏಪ್ರಿಲ್ 2 ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ. ಸಂಜೆ 7.30ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಪಾಫ್ ಡು ಪ್ಲಸೆಸ್ ಆರ್ ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸವೆಲ್, ದಿನೇಶ್ ಕಾರ್ತಿಕ್, ರಜತ್ ಪಟೇದಾರ್ ಅವರ ಅಬ್ಬರದ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!