ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಸ್ಪೀಡ್ ಡಿಟೆಕ್ಟರ್

107

ಪ್ರಜಾಸ್ತ್ರ ಸುದ್ದಿ

ಮಂಡ್ಯ: ರಾಜ್ಯದಲ್ಲಿ ಇತ್ತೀಚೆಗೆ ಅಪಘಾತ ಕಾರಣಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ. ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಅವರ ಭೇಟಿ ನೀಡಿ, ಅಪಘಾತಕ್ಕೆ ಅಪೂರ್ಣ ಕಾಮಗಾರಿ ಕಾರಣವೆಂದು ಹೇಳಿದ್ದರು.

ಇಂದು ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಅಪಘಾತ ತಡೆಗಾಗಿ ಸ್ಪೀಡ್ ಡಿಟೆಕ್ಟರ್ ಗೆ ಚಾಲನೆ ನೀಡಿದರು. ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಗೇಟ್ ಹತ್ತಿರ ಹೊಸ ಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಸ್ಪೀಡ್ ಡಿಟೆಕ್ಟರ್ ಇರಲಿಲ್ಲ. ಇದೀಗ ಅಳವಡಿಸಲಾಗಿದೆ. ಬರೀ ವೇಗ ಮಾತ್ರವಲ್ಲ ವಾಹನಗಳ ಚಲಾವಣೆಯ ಮೇಲೂ ನಿಗಾವಹಿಸಲಾಗುತ್ತೆ ಎಂದರು.

ಸಧ್ಯ ಎರಡು ಸ್ಪೀಡ್ ಡಿಟೆಕ್ಟರ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ 10 ಕಿಲೋ ಮೀಟರ್ ಗೆ ಒಂದರಂತೆ ಅಳವಡಿಸಲಾಗುವುದು. ಆಗ ಅಪಘಾತ ಪ್ರಮಾಣ ಸಂಪೂರ್ಣ ತಡೆಯಬಹುದು. ಇನ್ನು ಉಳಿದ ಕೆಲಸಕ್ಕಾಗಿ 151 ಕೋಟಿಯ ಪ್ರಸ್ತಾವನೆ ಕಳಿಸಿದ್ದಾರೆ. ನವೆಂಬರ್ ನಂತರ ಕೆಲಸ ಶುರುವಾಗಲಿದೆ ಅಂತಾ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!