ಸಿಲಿಕಾನ್ ಸಿಟಿಯ 15 ರಸ್ತೆಗಳು ಸಂಪೂರ್ಣ ಬಂದ್

341

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದಲ್ಲಿ ಕರೋನಾ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತಲೆ ನೋವಾಗಿದೆ. ಹೀಗಾಗಿ ನಗರದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದ್ದು, ಇದೀಗ ಬಿಬಿಎಂಪಿ 15 ಪ್ರಮುಖ ರಸ್ತೆಗಳನ್ನ ಸೀಲ್ ಡೌನ್ ಮಾಡಿದೆ.

ಕೆ.ಆರ್ ಮಾರ್ಕೆಟ್ ಮೇನ್ ರೋಡ್, ಕಲಾಸಿಪಾಳ್ಯ, ಟೌನ್ ಹಾಲ್ ಸರ್ಕಲ್, ಜೆಸಿ ರೋಡ್, ಸರ್ವಿಸ್ ರೋಡ್, ಟಿಪ್ಪು ಸುಲ್ತಾನ್ ಪ್ಯಾಲೇಸ್ ರೋಡ್, ಕಿಲಾರಿ ರೋಡ್, ಭಾಷಂ ಸರ್ಕಲ್, ತರಗುಪೇಟೆ 2 ಹಾಗೂ 4ನೇ ಮುಖ್ಯರಸ್ತೆ, ಸಣಕಲ್ ಪೇಟೆ ರಸ್ತೆ, ಎಸ್ಪಿ ರೋಡ್ ಸೇರಿದಂತೆ ಪ್ರಮುಖ 15 ರಸ್ತೆಗಳನ್ನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಈ ಎಲ್ಲಾ ಏರಿಯಾಗಳ ವ್ಯಾಪಾರ, ವಹಿವಾಟು ಸೇರಿದಂತೆ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಿದೆ. ಎಲ್ಲೆಡೆ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದ್ದು, ಅನಗತ್ಯವಾಗಿ ಬೀದಿಗೆ ಬರುತ್ತಿರುವವರ ಮೇಲೆ ಪೊಲೀಸ್ರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!