ಬೆಂಗಳೂರು ಗ್ಯಾಂಗ್ ರೇಪ್ ಕೇಸ್: ಪೊಲೀಸರ ವಶದಲ್ಲಿ ಕಿಂಗ್ ಪಿನ್

265

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಆರೋಪಿಗಳನ್ನು ಅಕ್ರಮವಾಗಿ ಭಾರತಕ್ಕೆ ಕರೆತಂದವನನ್ನ ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಪೊಲೀಸರು ನೀಡಿದ ಸುಳಿವಿನ ಮೇರೆಗೆ ರಫೀಕ್ ಎಂಬಾತನನ್ನ ಬಂಧಿಸಲಾಗಿದೆ.

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ರಫೀಕ್ ಹೆಸರು ಬಾಯಿ ಬಿಟ್ಟಿದ್ದರು. ಈತ ಬಾಂಗ್ಲಾ ಮೂಲದ ಯುವತಿಯರನ್ನ ಅಕ್ರಮವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಅನ್ನೋದು ತಿಳಿದಿದೆ.

ನಗರ ಪೂರ್ವ ವಿಭಾದ ಪೊಲೀಸರು ರಫೀಕನ ಹುಡುಕಾಟ ನಡೆಸಿದ್ದಾರೆ. ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಬಾಂಗ್ಲಾದಲ್ಲಿರುವುದು ತಿಳಿದಿದೆ. ಮಾನವ ಕಳ್ಳಸಾಗಾಣಿಕೆ ಮಾಡುತ್ತಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಸುಳಿವು ಕೊಟ್ಟಿದ್ದಾರೆ. ಇದೀಗ ಬಾಂಗ್ಲಾ ಪೊಲೀಸರು ಅವನ್ನ ಅರೆಸ್ಟ್ ಮಾಡಿದ್ದು, ಶೀಘ್ರದಲ್ಲೇ ಬೆಂಗಳೂರಿಗೆ ಕರೆ ತರುವುದಾಗಿ ಪೊಲೀಸರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!