ಬೆಂಗಳೂರು ಜಗತ್ತಿನ 2ನೇ ಅತಿ ಹೆಚ್ಚು ಟ್ರಾಫಿಕ್ ಇರುವ ನಗರ

164

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಗೆ ನಿತ್ಯ ಸಾಗರೋಪಾದಿಯಲ್ಲಿ ಜನರು ಬರುತ್ತಾರೆ. ಇದೊಂದು ರೀತಿಯ ಮಿನಿ ವರ್ಲ್ಡ್. ಎಲ್ಲ ಭಾಷೆ, ಧರ್ಮ, ದೇಶಗಳ ಜನರಿದ್ದಾರೆ. ಹೀಗಾಗಿ ಇಲ್ಲಿ ಹೆಚ್ಚು ಜನದಟ್ಟಣೆ ಇದೆ. ಅದು ಎಷ್ಟರ ಮಟ್ಟಿಗೆ ಇದೆ ಅಂದರೆ, ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಜಗತ್ತಿನ 2ನೇ ನಗರವಾಗಿದೆ.

ಡಚ್ ಲೊಕೇಷನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ ಟಾಮ್ ಪ್ರಕಟಿಸಿರುವ ವರದಿ ಪ್ರಕಾರ, 2022ರ ಟ್ರಾಫಿಕ್ ಸೂಚ್ಯಂಕದಲ್ಲಿ ಬೆಂಗಳೂರು ವಿಶ್ವದ 2ನೇ ನಗರವಾಗಿದೆ. 10 ಕಿಲೋ ಮೀಟರ್ ಪ್ರಯಾಣಿಸಲು 29 ನಿಮಿಷ 10 ಸಕೆಂಡ್ ತೆಗೆದುಕೊಳ್ಳಲಾಗಿದೆ. 10 ಕಿಲೋ ಮೀಟರ್ ಪ್ರಯಾಣಿಸಲು 36 ನಿಮಿಷ 20 ಸಕೆಂಡ್ ತೆಗೆದುಕೊಂಡ ಲಂಡನ್ ಮೊದಲ ಸ್ಥಾನದಲ್ಲಿದೆ.

ಪುಣೆ 6ನೇ ಸ್ಥಾನದಲ್ಲಿದೆ. ನವದೆಹಲಿ 34 ಹಾಗೂ ಮುಂಬೈ 47ನೇ ಸ್ಥಾನದಲ್ಲಿವೆ. ಬೆಂಗಳೂರಿನಲ್ಲಿ ಪೀಕ್ ಅವರ್ಸ್ ಗಳಲ್ಲಿ ಮುಂಜಾನೆ 15 ನಿಮಿಷ ತೆಗೆದುಕೊಂಡರೆ ಸಂಜೆ 20 ನಿಮಿಷ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತೆ. ಹೀಗಾಗಿ ಬೆಂಗಳೂರಿಗರು 10 ದಿನಗಳಲ್ಲಿ 260 ಗಂಟೆಗಳನ್ನು ಪ್ರಯಾಣದಲ್ಲಿ 134 ಗಂಟೆ ಟ್ರಾಫಿಕ್ ಸಮಸ್ಯೆಯಿಂದ ಕಳೆದುಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!