27 ವರ್ಷಗಳ ದಾಂಪತ್ಯ ಜೀವನಕ್ಕೆ ಬಿಲ್ ಗೇಟ್ಸ್ ದಂಪತಿ ಗುಡ್ ಬೈ

292

ಪ್ರಜಾಸ್ತ್ರ ಸುದ್ದಿ

ವಾಷಿಂಗ್ಟನ್: ವಿಶ್ವದ ದೈತ್ಯ ಸಾಫ್ಟವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ದಂಪತಿ ತಮ್ಮ 27 ವರ್ಷಗಳ ಸಂಸಾರಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ವಿಶ್ವದ ಅತೀ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಟಾಪ್ ನಲ್ಲಿ ಈ ದಂಪತಿ ಇದ್ರು. ಇಬ್ಬರ ಒಟ್ಟು ಆಸ್ತಿ ಅಂದಾಜು 13 ಸಾವಿರ ಕೋಟಿ ಡಾಲರ್ ಎನ್ನಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ವಿಚ್ಛೇದನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಬಿಲ್ ಮತ್ತು ಮೆಲಿಂಡಾ ಫೌಂಡೇಷನ್ ಮೂಲಕ ಕೈಗೊಳ್ಳುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ಇತರೆ ಸಮಾಜಮುಖಿ ಕೆಲಸಗಳನ್ನ ಮುಂದುವರೆಸುತ್ತೇವೆ. ಆದ್ರೆ, ವೈವಹಿಕ ಬದುಕಿನ ಸಂಬಂಧ ಕೊನೆಗೊಳಿಸುತ್ತಿದ್ದೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!