ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ. ಅಮೇಜಾನ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೋಜಸ್ ಅವರನ್ನ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಶ್ರೀಮಂತರಾಗಿದ್ದಾರೆ.
ಫೋಬ್ಸ್ ರಿಲೀಸ್ ಮಾಡಿರುವ 2019-20 ವರ್ಷದ ಮೂರನೇ ತ್ರೈಮಾಸಿಕ ಪಟ್ಟಿಯಲ್ಲಿ ಅಮೇಜಾನ್ 103.9 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ ಅಂತಾ ಹೇಳಲಾಗಿದೆ. ಅಮೇಜಾನ್ ಷೇರು ಶೇಕಡ 9ರಷ್ಟು ಕುಸಿದಿದೆ. ಬಿಲ್ ಗೇಟ್ಸ್ 105.7 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ. ಇದ್ರಿಂದಾಗಿ ಅಮೇಜಾನ್ ಸಂಸ್ಥಾಪಕ ಒಂದೇ ದಿನದಲ್ಲಿ ಬರೋಬ್ಬರಿ 7 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.
2018ರಲ್ಲಿ 137 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿತ್ತು. ಅಂದ್ರೆ, ಬರೋಬ್ಬರಿ 9 ಲಕ್ಷದ 67 ಸಾವಿರದ 289 ಕೋಟಿ ರೂಪಾಯಿ. ಇದೀಗ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಬೋಜಸ್ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.