ಬಿಟ್ ಕಾಯಿನ್ ಹಗರಣ: ಸಚಿವರು, ಐಪಿಎಸ್ ಅಧಿಕಾರಿಗಳಿರುವ ಆಡಿಯೋ ವೈರಲ್

312

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಈಗ ಬಹುದೊಡ್ಡ ಸುದ್ದಿ ಅಂದರೆ ಬಿಟ್ ಕಾಯಿನ್ ಹಗರಣ. ಮುಖ್ಯಮಂತ್ರಿ ಬೊಮ್ಮಾಯಿ ಸ್ಥಾನವೇ ಹೋಗಲಿದೆ ಅನ್ನುವಷ್ಟರ ಮಟ್ಟಿಗೆ ಇದು ದೊಡ್ಡದಿದೆ. ಹೀಗಿರುವಾಗ ಈ ಬಿಟ್ ಕಾಯಿನ್ ಹಗರಣದಲ್ಲಿ ಸಚಿವರು ಹಾಗೂ ಐಪಿಎಸ್ ಅಧಿಕಾರಿಗಳಿಗೂ ಪಾಲು ಹೋಗಿದೆ ಅನ್ನೋ ರೀತಿಯ ಆಡಿಯೋವೊಂದು ವೈರಲ್ ಆಗಿದೆ.

ಐಪಿಎಸ್ ಅಧಿಕಾರಿ ಹಾಗೂ ತನಿಖಾಧಿಕಾರಿ ಮಾತನಾಡಿದ್ದಾರೆ ಅನ್ನೋ ಆಡಿಯೋ ಸಂಭಾಷಣೆಯ ವಿವರ ಹೀಗಿದೆ..

ಐಪಿಎಸ್ ಅಧಿಕಾರಿ- ಅಂದಾಜು, ಇವತ್ತು ಬಿಟ್‌ಕಾಯಿನ್ ಎಷ್ಟು?

ತನಿಖಾಧಿಕಾರಿ- ಈಗ ಒಂದು ಬಿಟ್‌ಕಾಯಿನ್ ₹ 56 ಲಕ್ಷ ಇದೆ. ಅದರಲ್ಲಿಯೂ ವೆರೈಟೀಸ್ ಇದೆ. ₹ 30 ಲಕ್ಷ ಇದೆ. ಡಿಪೆಂಡ್ಸ್‌.

ಐಪಿಎಸ್ ಅಧಿಕಾರಿ: ಅವನ ಅಕೌಂಟ್‌ನಿಂದ ಬೇರೆಯವರ ಅಕೌಂಟ್‌ಗೆ ಬಿಟ್‌ಕಾಯಿನ್ ಹೋಗಿದ್ಯಾ?

ತನಿಖಾಧಿಕಾರಿ: ಹಾ ಹೋಗಿದೆ ಸರ್. ದೊಡ್ಡವರು ಸುಮಾರು ಜನ ಟ್ರಾನ್ಸಾಕ್ಷನ್‌ ಅದ್ರಲ್ಲೇ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ: ಯಾರು ಅಂತಾ ನಿಮಗೆ ಗೊತ್ತಾ?

ತನಿಖಾಧಿಕಾರಿ: ಅರ್ಧಂಬರ್ಧ ಗೊತ್ತಿದೆ ಸರ್. ಫುಲ್ ಕನ್ಫರ್ಮ್ ಇಲ್ಲ. ಎಲ್ಲ ದೊಡ್ಡವರೇ ಇದ್ದಾರೆ.

ಐಪಿಎಸ್ ಅಧಿಕಾರಿ: ಯಾರ್ಯಾರಿದ್ದಾರೆ ಅಂದಾಜು?

ತನಿಖಾಧಿಕಾರಿ: ಮಿನಿಸ್ಟರ್ ಲೆವೆಲ್ನಲ್ಲೇ ಇದ್ದಾರೆ.

ಐಪಿಎಸ್ ಅಧಿಕಾರಿ: ಹೋಮ್ ಮಿನಿಸ್ಟರ್…ಆ?

ತನಿಖಾಧಿಕಾರಿ: ಅಲ್ಲಲ್ಲ, ಬೇರೆ ಮಿನಿಸ್ಟರ್‌ಗಳಿದ್ದಾರೆ. ಐಪಿಎಸ್ ಅಧಿಕಾರಿಗಳಿದ್ದಾರೆ.

ಐಪಿಎಸ್ ಅಧಿಕಾರಿ: ಐಪಿಎಸ್ ಅಂದ್ರೆ ಯಾರ್ಯಾರು?

ತನಿಖಾಧಿಕಾರಿ: ಹೆಸರು ಗೊತ್ತಿಲ್ಲ ಸರ್.

ಐಪಿಎಸ್ ಅಧಿಕಾರಿ: ಆಯ್ತು ಬಿಡಪ್ಪ. ಒಟ್ನಲ್ಲಂತೂ ಆಗಿದೆ.

ತನಿಖಾಧಿಕಾರಿ: ಆಗಿದೆ ಸರ್.

ಐಪಿಎಸ್ ಅಧಿಕಾರಿ: ನಿನ್ನೆ ಮೊನ್ನೆ ಶರತ್ ಅವ್ರನ್ನ ಕರೆದಿದ್ರಾ?

ತನಿಖಾಧಿಕಾರಿ: ಇಲ್ಲ, ಇವ್ರು ಎರಡು, ಮೂರು ದಿನದ ಹಿಂದೆ ಹೋಗಿದ್ರು. ಇಂಟೆಲಿಜೆನ್ಸ್‌ನವರು ಕರೆದಿದ್ದರು. ಎರಡು ದಿನಗಳ ಹಿಂದೆ ದಯಾನಂದ್ ಸಾಹೇಬ್ರು ಫುಲ್ ಅವನ ಮಾಹಿತಿ ತಗೊಂಡ್ರು

ಐಪಿಎಸ್ ಅಧಿಕಾರಿ: ಅವನ ಬಗ್ಗೆ ಕೇಳುವುದಕ್ಕೆ ಅಷ್ಟೇನಾ

ತನಿಖಾಧಿಕಾರಿ: ಹೌದು ಅವನ ಬಗ್ಗೆ ಇನ್ಫರ್ಮೇಷನ್‌ ಕೇಳುವುದಕ್ಕೆ ಕರೆಸಿದ್ದರು.

ಐಪಿಎಸ್ ಅಧಿಕಾರಿ: ಏನ್ ಸೆಕ್ಷನ್ ಹಾಕಿದ್ರು?

ತನಿಖಾಧಿಕಾರಿ: 66-ಇ. ಮಾಮೂಲಿ ಸರ್ ಅದು. ಬೇರೇನೂ ಇಲ್ಲ.

ಐಪಿಎಸ್ ಅಧಿಕಾರಿ: ಹೌದಾ?

ತನಿಖಾಧಿಕಾರಿ: ಹೌದು ಸರ್ ಅವನು ಎರಡ್ಮೂರು ತಿಂಗಳು ಒಳಗಡೆ ಇದ್ದ. ಆಮೇಲೆ ಬೇಲ್ ಆಯ್ತು.




Leave a Reply

Your email address will not be published. Required fields are marked *

error: Content is protected !!