ಫಸ್ಟ್ ನೈಟ್ ಮಾತು: ರಚಿತಾ ವಿರುದ್ಧ ನಿಷೇಧಕ್ಕೆ ಒತ್ತಾಯ

310

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಮರಾಜನಗರ: ಲವ್ ಯೂ ರಚ್ಚು ಸಿನಿಮಾದ ಹಾಡೊಂದರಲ್ಲಿ ನಟಿ ರಚಿತಾ ರಾಮ್ ಹಾಗೂ ನಟ ಅಜಯ್ ರಾವ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ವೇಳೆ ನಟಿ ರಚಿತಾ ರಾಮ್, ಫಸ್ಟ್ ನೈಟ್ ನಲ್ಲಿ ನೀವು ಏನ್ ಮಾಡ್ತೀರಾ ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು.

ಫಸ್ಟ್ ನೈಟ್ ನಲ್ಲಿ ರೊಮ್ಯಾನ್ಸ್ ಮಾಡ್ತಾರೆ. ನಾವು ಅದನ್ನೇ ಮಾಡಿದ್ದು ಎಂದು ಹೇಳಿದ್ದರು. ಅದು ಸಾಕಷ್ಟು ವೈರಲ್ ಆಗಿದ್ದು, ವಿವಿಧ ರೀತಿಯಲ್ಲಿ ಟ್ರೋಲ್ ಆಗುತ್ತಿದೆ. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕ್ರಾಂತಿ ದಳ ಸಂಘಟನೆ, ನಟಿಯ ಮೇಲೆ ನಿಷೇಧ ಹೇರಬೇಕು ಎಂದಿದೆ.

ಕ್ರಾಂತಿ ದಳದ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆ ತರುವ ಹೇಳಿಕೆಯನ್ನು ನಟಿ ರಚಿತಾ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಟಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!