ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬರೋಬ್ಬರಿ 13 ವರ್ಷಗಳ ನಂತರ ನಿರ್ದೇಶಕ ನಾಗಶೇಖರ್ ಅವರು ತಮ್ಮ ಯಶಸ್ವಿ ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್ ಮಾಡುತ್ತಿದ್ದು, ಇಂದು ಅದರ ಟೀಸರ್ ರಿಲೀಸ್ ಮಾಡಲಾಗಿದೆ. ನಟ ಶ್ರೀನಗರ ಕಿಟ್ಟಿ ಜೊತೆಯಾಗಿ ಡಿಂಪಿಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ಪ್ರೇಮ ಕಾವ್ಯ ಹೇಳಲು ನಾಗಶೇಖರ್ ರೆಡಿಯಾಗಿದ್ದು, ಸಂಜು ವೆಡ್ಸ್ ಗೀತಾ ಚಿತ್ರ ನೋಡಿದ ಪ್ರತಿಯೊಬ್ಬರು ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ. 2011ರಲ್ಲಿ ನಟ ಶ್ರೀನಗರ ಕಿಟ್ಟಿ, ಮೋಹಕ ತಾರೆ ನಟಿ ರಮ್ಯಾ ಕಾಂಬಿನೇಷನ್ ಸಂಜು ವೆಡ್ಸ್ ಗೀತಾ ಬ್ಲಾಕ್ ಬ್ಲಸ್ಟರ್ ಆಗಿತ್ತು. ರಮ್ಯಾ ಜಾಗದಲ್ಲಿ ರಚಿತಾ ರಾಮ್ ಬಂದಿದ್ದಾರೆ. ಈ ಕಾಂಬಿನೇಷನ್ ಹಾಗೂ ಕಥೆ ಸಿನಿ ಪ್ರೇಮಿಗಳಿಗೆ ಎಷ್ಟು ಸೆಳೆಯುತ್ತೆ ಕಾದು ನೋಡಬೇಕು.
ಶ್ರೀಧರ್ ಸಂಭ್ರಮ ಮ್ಯೂಸಿಕ್ ಇದೆ. ಸತ್ಯಾ ಹೆಗ್ಡೆ ಕ್ಯಾಮೆರಾ, ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಫಿ ಇದೆ. ಚಲವಾದಿ ಕುಮಾರ್, ಮಾಪಿ ನಾರಾಯಣ ಬಂಡಾವಳ ಹೂಡಿದ್ದಾರೆ. ನಾಗಶೇಖರ್ ಮೂವಿ ಪ್ರೊಡಕ್ಷನ್, ಮಹಾನಂದಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಸಂಜು ವೆಡ್ಸ್ ಗೀತಾ-2 ಸಿನಿಮಾ ನಿರ್ಮಾಣವಾಗುತ್ತಿದೆ.