ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ: ರೇಣುಕಾ ಕಡಿಮನಿ

317

ಪ್ರಜಾಸ್ತ್ರ ಸುದ್ದಿ

ಸಿಂದಗಿ: ನಾವು ಇಂದು ಸ್ವತಂತ್ರ ಬದುಕುತ್ತಿದ್ದೇವೆ. ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ತೆರೆದುಕೊಳ್ಳಲು, ನಮ್ಮ ಹಿರಿಯರ ತ್ಯಾಗ ಬಲಿದಾನವೇ ಕಾರಣ. ಹೀಗಾಗಿ 77ನೇ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಅವರನ್ನೆಲ್ಲ ಸ್ಮರಿಸಿಕೊಳ್ಳಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕನ್ನೊಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಅನಿಲ ಕಡಿಮನಿ ಹೇಳಿದರು.

ಧ್ವಜಾರೋಹಣ ಬಳಿಕ ಸಿಸಿ ನೆಡುವ ಮೂಲಕ ಪರಿಸರ ಕಾಪಾಡುವ ಸಂದೇಶ ಸಾರಲಾಯಿತು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಸಮ್ಮ ಪುಂಡಪ್ಪ ಬಗಲಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಂಕರ ಬಗಲಿ, ಮಾಜಿ ತಾಲೂಕು ಪಂಚಾಯತ ಸದಸ್ಯ ಶಿವಯೋಗಿ ಮೂಡಗಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ನಾಯಿಕ, ಕಾರ್ಯದರ್ಶಿ ಯಲ್ಲಪ್ಪ ಮೇಟಿ, ಗ್ರಾಮ ಲೆಕ್ಕಾಧಿಕಾರಿ ಮುರುಳಿ, ಸದಸ್ಯರಾದ ಮಲ್ಲು ಯಂಕಂಚಿ, ಗೊಲ್ಲಾಳಪ್ಪ ಮಾಗಣಗೇರಿ, ಪ್ರಭುಲಿಂಗ ಸ್ಥಾವರಮಠ, ಅಕ್ಬರ ಇನಾಮದಾರ, ಯಮನೂರಿ ಚೌಧರಿ, ಲಕ್ಷ್ಮಣ ಚೌಧರಿ, ಯಮನಪ್ಪ ಮೂಡಗಿ, ಪರಶುರಾಮ ಬೇಡರ, ವಿದ್ಯಾಧರ ಕೊಲ್ಲೂರ, ಮಹೇಶ ಬಜಂತ್ರಿ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!