ಸಂವಿಧಾನದಿಂದ ಸರ್ವರಿಗೂ ಸಮಬಾಳು: ಲಕ್ಷ್ಮಿರಾಮ್

803

ಪ್ರಜಾಸ್ತ್ರ ಸುದ್ದಿ

ಮೈಸೂರು: ನಾಟ್ಯ ಸಂಸ್ಥೆ ಮತ್ತು ಬಿ.ಎಮ್ ಹೆಬಿಟೆಂಟ್  ಮಾಲ್ ಮೈಸೂರು ನೇತೃತ್ವದಲ್ಲಿ 77ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಸಾಂಸ್ಕೃತಿಕ ಚಿಂತಕ ಲಕ್ಷ್ಮಿರಾಮ್, ಲಕ್ಷ ಲಕ್ಷ  ಜನರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಅದಕ್ಕಾಗಿ ಹೋರಾಡಿ ಮಡಿದ ಎಲ್ಲರನ್ನು ನಾವು ಸ್ಮರಿಸಬೆಕು ಎಂದರು.

ಗಾಂಧೀಜಿ ನೇತೃತ್ವ ವಹಿಸಿ ಬುದ್ಧರ ಶಾಂತಿ ಮಾರ್ಗದಿಂದ ನಮಗೆ ಸ್ವತಂತ್ರ ಬಂತು. ಹಾಗೆಯೇ ಹಲವು ಭಾಷೆ ಸಂಸ್ಕೃತಿ, ಆಚಾರ ವಿಚಾರ ಎಲ್ಲವನ್ನು ಒಂದೇ ತೆಕ್ಕೆಗೆ ತಂದು ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ಸಂವಿಧಾನ ರಚಿಸಿ ‘ಭಾರತದ ಪ್ರಜೆಗಳಾದ ನಾವು’ ಎಂದು ಹೇಳುವಂತೆ ಮಾಡಿದ್ದು ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಅಂತಾ ಹೇಳಿದರು.

ಈ ವೇಳೆ ವೇದಿಕೆಯಲ್ಲಿ ಕವಿ ಶಿಶಿರಂಜನ್, ಕಲಾವಿದರಾದ ಹುಯಿಲಾಲು ರಾಮಸ್ವಾಮಿ, ಭರತ  ನಾಟ್ಯ ವಿದುಷಿ ಮಹೇಶ್ವರಿ ಉಪಸ್ಥಿತರಿದ್ದರು. ಸಂತೋಷ್ ಕಲಾವಿದ ಅವರ ಶಿಷ್ಯರು ಪ್ರಸ್ತುತಪಡಿಸಿದ ನೃತ್ಯ ಜನಮನ ಗೆದ್ದಿತು.




Leave a Reply

Your email address will not be published. Required fields are marked *

error: Content is protected !!