ಶಾಸಕ ಲಿಂಬಾವಳಿ ಅವರೇ ಮಹಿಳೆಯರಿಗೆ ಇದೇನೆ ಗೌರವ?

185

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಈ ಹಿಂದೆ ಅಶ್ಲೀಲ ವಿಡಿಯೋ ಲೀಕ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅವರ ವಿರುದ್ಧ ವಿಪಕ್ಷಗಳು ಭರ್ಜರಿ ವಾಗ್ದಾಳಿ ನಡೆಸಿದ್ದರು. ಅಂದೇ ಅವರಿಗೆ ಅವರ ಪಕ್ಷದವರು ಸರಿಯಾಗಿ ಪಾಠ ಕಲಿಸಿದ್ದರೆ ಇಂದು, ಮತ್ತೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ.

ಏನೋ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಂದಿಗೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಶಾಸಕ ಅನ್ನೋ ಅಧಿಕಾರದ ದರ್ಪ ತೋರಿಸಿದ್ದಾರೆ. ವರ್ತೂರು ಕೆರೆ ಕೋಡಿ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಮಹಿಳೆಗೆ ಏಕವಚನದಲ್ಲಿ ಮಾತನಾಡಿದ್ದಲ್ಲದೇ, ಬೇರೆ ಭಾಷೆ ಬರುತ್ತೆ ಎಂದು ಆವಾಜ್ ಹಾಕಿದ್ದಾರೆ.

ಬಿಜೆಪಿ ಶಾಸಕ ಲಿಂಬಾವಳಿ ಅವರ ವರ್ತನೆಗೆ ವಿಪಕ್ಷಗಳು ಸೇರಿದಂತೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಟೀಕೆಗಳು ವ್ಯಕ್ತವಾಗುತ್ತಿವೆ. ಜನರಿಂದ ಆಯ್ಕೆಯಾಗಿ ಹೋದ ಶಾಸಕರು, ಜನರ ಸೇವಕ ಅನ್ನೋದು ಬರೀ ಭಾಷಣದಲ್ಲಿ. ವಾಸ್ತವದಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ.




Leave a Reply

Your email address will not be published. Required fields are marked *

error: Content is protected !!