ಬರ್ತಿದ್ದಾನೆ ಬುದ್ಧಿವಂತ-2

349

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಮೇಘನಾ ರಾಜ್ ಅಭಿನಯದ ಬುದ್ಧಿವಂತ-2 ಸಿನಿಮಾ ಶೂಟಿಂಗ್ ಶುರುವಾಗಿದೆ. ಈ ಬಗ್ಗೆ ನಟಿ ಮೇಘನಾ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಗಳನ್ನ ಪೋಸ್ಟ್ ಮಾಡಿದ್ದಾರೆ. ಇದು ಉಪ್ಪಿ ಫ್ಯಾನ್ಸ್ ಖುಷಿಗೆ ಕಾರಣವಾಗಿದೆ.

ಪೋಸ್ಟರ್ ಜೊತೆಗೆ ವಿಡಿಯೋ ಸಹ ಪೋಸ್ಟ್ ಮಾಡಿದ್ದು, ಹೊಸ ದಿನ.. ಹೊಸ ಸಿನಿಮಾ ಲಾಂಚ್.. ಬುದ್ಧಿವಂತ ಸೀಕ್ವೆಲ್.. ಎಂದು ಪೋಸ್ಟ್ ಮಾಡಿದ್ದಾರೆ. ಬುದ್ಧಿವಂತ ಸಿನಿಮಾದ ಮೊದಲ ಪಾರ್ಟ್ ನಲ್ಲಿ ನಾಲ್ಕು ಜನ ನಾಯಕಿಯರಿದ್ದರು. ಈ ಚಿತ್ರದಲ್ಲಿ ಎಷ್ಟು ಜನ ಇರುತ್ತಾರೆ ಅನ್ನೋ ಕುತೂಹಲವಿದೆ. ಸಧ್ಯ ಮೇಘನಾ ರಾಜ್ ಒಬ್ಬರು ಅನ್ನೋದು ತಿಳಿದಿದ್ದು, ಉಳಿದ ವಿಷ್ಯ ಸಧ್ಯಕ್ಕೆ ಸೀಕ್ರೆಟ್ ಆಗಿದೆ.




Leave a Reply

Your email address will not be published. Required fields are marked *

error: Content is protected !!