ಬೆಂಗಳೂರಲ್ಲಿ ಮತ್ತೊಂದು ದುರಂತ: ಬಹುಮಹಡಿ ಕಟ್ಟಡ ಕುಸಿತ

218

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಾದ್ಮೇಲೆ ಒಂದು ದುರಂತ ಸಂಭವಿಸುತ್ತಿವೆ. ಇದೀಗ ಬಹುಮಹಡಿ ಕಟ್ಟಡವೊಂದು ಕುಸಿದಿದೆ. ನಗರದ ಲಕ್ಕಸಂದ್ರದಲ್ಲಿನ ಬಹುಮಹಡಿ ಕಟ್ಟಡ ಕುಸಿದಿದೆ. ಇದರಲ್ಲಿ 20ಕ್ಕೂ ಹೆಚ್ಚು ಜನರು ವಾಸವಾಗಿದ್ದರಂತೆ.

ಮೆಟ್ರೋ ಕಾಮಗಾರಿಯಿಂದ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!